ಬೆಂಗಳೂರು: ಕಾವೇರಿ ಉಳಿವಿಗಾಗಿ ಬೆಂಗಳೂರು ಗ್ರಾಮಾಂತರ-ಬೆಂಗಳೂರು ಬಂದ್‍ನ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ರಯಾಣಿಕರು ಬೆಂಗಳೂರು ಪ್ರಯಾಣ ರದ್ದು ಮಾಡಿರುವ ಹಿನ್ನೆಲೆಯಲ್ಲಿ 13 ದೇಶೀಯ ವಿಮಾನಗಳ ಆಗಮನ ಕೊನೆ ಕ್ಷಣದಲ್ಲಿ ರದ್ದಾಗಿದೆ. ದೆಹಲಿ, ಕೊಚ್ಚಿ, ಮಂಗಳೂರು, ಮುಂಬೈ ಸೇರಿದಂತೆ ಇತರೆ 13 ವಿಮಾನಗಳ ಹಾರಾಟವನ್ನ ಏರ್ ಲೈನ್ಸ್ ನವರು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದಾರೆ.
ಹೀಗಾಗಿ ಸಹಜವಾಗಿ ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಪರೋಕ್ಷವಾಗಿ ಇದು ಕ್ಯಾಬ್ ಚಾಲಕರ ಮೇಲೂ ಪರಿಣಾಮ ಬೀರಿದೆ. ಪ್ರಯಾಣಿಕರಿಗಾಗಿ ಕ್ಯಾಬ್ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ