ಬೆಂಗಳೂರು;- ಕಾವೇರಿಗಾಗಿ ಕರೆ ನೀಡಿರುವ ಬೆಂಗಳೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆ ಸಾರ್ವಜನಿಕರಿಂದ ಬಂದ್ ಗೆ ಕರೆ ಕೊಟ್ಟವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಒಗ್ಗಟ್ಟು ಪ್ರದರ್ಶನ ಮಾಡಬೇಕಿದ್ದ ಪ್ರತಿಭಟನೆ ಇದು. ಆದರೆ ನಾಯಕರುಗಳ ಸ್ವ ಪ್ರತಿಷ್ಠೆ ಗೆ ಎಲ್ಲರಿಗೂ ತೊಂದರೆ ಆಗಿದೆ. ಎರಡು ದಿನ ಬಂದ್ ಮಾಡುವುದು ಕಷ್ಟವಾಗುತ್ತದೆ. ಒಂದೇ ದಿನ ಕರ್ನಾಟಕ ಬಂದ್ ಮಾಡಿದ್ದರೆ ಸರಿಯಾಗುತಿತ್ತು. ಆದರೆ ಅವರ ಸ್ವ ಪ್ರತಿಷ್ಠೆ ಗೆ ಕಾವೇರಿ ಹೋರಾಟ ದಿಕ್ಕುತಪ್ಪುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ