ಗ್ರೀಸ್: ಕುರಿಹಿಂಡು ಹುಲ್ಲು ಎಂದು ಭಾವಿಸಿ ಬರೋಬ್ಬರಿ 100 ಕೆಜಿ ಗಾಂಜಾ ಸೊಪ್ಪನ್ನ ತಿಂದಿರುವ ಘಟನೆ ಗ್ರೀಸ್‌ನ ಥೆಸ್ಸಾಲಿಯ ಅಲ್ಮಿರೋಸ್ ಪಟ್ಟಣದಲ್ಲಿ ನಡೆದಿದೆ.
ಪ್ರವಾಹದಿಂದ ರಕ್ಷಿಸಲು ಕುರಿಯ ಹಿಂಡನ್ನು ಫಾರ್ಮ್ನ ಗ್ರೀನ್ಹೌಸ್ನಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಔಷಧೀಯ ಉಪಯೋಗಕ್ಕೆಂದು ಬೆಳೆಸಿದ್ದ ಗಾಂಜಾ ಸೊಪ್ಪನ್ನ, ಕುರಿಗಳು ತಿಂದಿವೆ. ಬಳಿಕ ಅವು ವಿಚಿತ್ರವಾಗಿ ವರ್ತಿಸೋದನ್ನ ಗಮನಿಸಿದ ಕುರುಬನಿಗೆ ಸನ್ನಿವೇಶ ಅರ್ಥವಾಗಿದೆ.
ಗಾಂಜಾ ತಿಂದಿದ್ದ ಕುರಿಗಳು ಬಹಳ ಎತ್ತರಕ್ಕೆ ಜಿಗಿಯುತ್ತಿದ್ದವು, ಅವುಗಳು ಅಷ್ಟು ಎತ್ತರಕ್ಕೆ ಜಿಗಿಯುತ್ತಿರುವುದನ್ನ ನಾನು ನೋಡೆ ಇರಲಿಲ್ಲ ಎಂದು ಕುರುಬ ಹೇಳಿದ್ದಾರೆ . ಇನ್ನು, ಗ್ರೀಸ್, ಲಿಬಿಯಾ, ಟರ್ಕಿ ಮತ್ತು ಬಲ್ಗೇರಿಯಾವನ್ನು ಡೇನಿಯಲ್ ಚಂಡಮಾರುತವು ಅಪ್ಪಳಿಸಿದ ನಂತರ ಕುರಿಗಳು ಆ ಜಾಗದಲ್ಲಿ ಆಶ್ರಯ ಪಡೆಯುತ್ತಿದ್ದವು.