Spread the love

ಕಲಬುರಗಿ  : ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಟ ತಾಳಲಾರದೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬಿಜೆಪಿ ಜತೆ ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಟೀಕಿಸಿದ್ದಾರೆ.  ದೇವೇಗೌಡರನ್ನೇ ಬಲವಂತ ಮಾಡಿ ಮೈತ್ರಿ ಗೆ ಒಪ್ಪಿಸಿದ್ದಾರೆ, ಮಗನ ಹಿಂಸೆಯಿಂದ ಮೈತ್ರಿಗೆ ದೇವೇಗೌಡರು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಜೆಡಿಎಸ್, ಜೆಡಿಎಸ್‌ಗೆ ಬಿಜೆಪಿ ಅವಶ್ಯಕತೆ ಇದೆ,

ಇಬ್ಬರು ಮುಳುಗಿ ಹೋಗೋ ಭಯದಲ್ಲಿದ್ದಾರೆ. ಹೀಗಾಗಿ ಒಬ್ಬರ ಕೈ ಒಬ್ಬರು ಹಿಡಿಯುತ್ತಿದ್ದಾರೆಂದು ಲೇವಡಿ ಮಾಡಿದರು. ಕುಮಾರಸ್ವಾಮಿ ನಡವಳಿಕೆಯಿಂದ ಅವರಿಗೆ ಈ ಸ್ಥಿತಿ ಬಂದಿದೆ. ಬೆಂಬಲ ಕೊಟ್ಟವರನ್ನು, ಸಹಾಯ ಮಾಡಿದವರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಬಾರದು. ಸರ್ಕಾರ ಬೀಳುತ್ತದೆ ಅನ್ನೋ ಬಿಜೆಪಿ, ಜೆಡಿಎಸ್ ನಾಯಕರು ಜೆ.ಎಚ್. ಪಟೇಲ್ ಅವರ ಗಾದೆ ಮಾತು ಅವರು ನೆನಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಜನವರಿಗೆ ಸರ್ಕಾರ ಉರಳುತ್ತೆ ಅನ್ನೋ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತನ್ನ ಹಣೆಬರಹವನ್ನು ಅವರಿಗೆ ಬರೆದುಕೊಳ್ಳಲು ಆಗಿಲ್ಲ, ಇನ್ನು ಆತ ಬೇರೆಯವರ ಹಣೆಬರಹ ಬರೆಯುತ್ತಾನಾ ಎಂದು ಮಾತಲ್ಲೇ ಟಾಂಗ್‌ ನೀಡಿದರು. ಸ್ವತಃ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರೂ ಸೋತಿದ್ದಾನೆ. ಯೋಗೇಶ್ವರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಕಾಂಗ್ರೆಸ್ ಹಣೆಬರಹ ಬರೆಯಲು ಸಾಧ್ಯವಿಲ್ಲ ಎಂದರು.

 


Spread the love