Spread the love

ಬೆಂಗಳೂರು;- ರಾಜಧಾನಿ ಬೆಂಗಳೂರು ಸೈಬರ್ ವಂಚನೆಗಳ ಕೇಂದ್ರವಾಗುತ್ತಿದ್ದು, ಒಂಬತ್ತು ತಿಂಗಳಲ್ಲಿ 470 ಕೋಟಿ ರೂ. ದೋಚಿದ್ದಾರೆ ವಂಚಕರು.

ದಾಖಲೆಗಳ ಪ್ರಕಾರ, ಈ ವರ್ಷ ಕೇವಲ ಒಂಬತ್ತು ತಿಂಗಳಲ್ಲಿ 470 ಕೋಟಿ ರೂಪಾಯಿಗಳನ್ನು ನಗರದ ಜನರು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಗರದಲ್ಲಿ 12,615 ಸೈಬರ್ ಪ್ರಕರಣಗಳು ದಾಖಲಾಗಿವೆ.

ಕಳೆದ ಒಂಬತ್ತು ತಿಂಗಳಲ್ಲಿ 12,615 ಸೈಬರ್ ಪ್ರಕರಣಗಳು ದಾಖಲಾಗಿವೆ ಮತ್ತು ಪೊಲೀಸರು 28.4 ಕೋಟಿ ರೂಪಾಯಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ 27.6 ಕೋಟಿ ಹಣವನ್ನು ದೂರುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

 


Spread the love