Spread the love

ಬೆಂಗಳೂರು: ವಾಹನ ಸವಾರರೇ ಇನ್ಮೇಲೆ ರೋಡಿಗಿಳಿಯುವ ಮುನ್ನ ಎಚ್ಚರ ವಹಿಸದಿದ್ದರೆ ಭಾರೀ ದಂಡ ವಿಧಿಸಬೇಕಾಗುತ್ತದೆ ಹಾಗೆ ಬೇಕಾಬಿಟ್ಟಿ ರೂಲ್ಸ್ ಉಲ್ಲಂಘನೆ ಮಾಡಿದ್ರೆ ಬೀಳುತ್ತೆ ಕೇಸ್ ಎಂದು ಸಾರಿಗೆ ಸಚಿವರು ಕಠಿಣ ಕ್ರಮ ಕೈಗೊಂಡಿದ್ದಾರೆ.

ನಗರದಲ್ಲಿ ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು  ಟ್ರಾಫಿಕ್ ಪೊಲೀಸರು ಮಾತ್ರವಲ್ಲ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಇನ್ಮೇಲೆ ಬೃಹತ್ ಕಾರ್ಯಾಚರಣೆ

ರೂಲ್ಸ್ ಬ್ರೇಕ್ ಮಾಡೋರನ್ನ ಹಿಡಿಯೋಕೆ ಸಾರಿಗೆ ಇಲಾಖೆ ಮಾಡ್ತಿದೆ ಮಾಸ್ಟರ್ ಪ್ಲಾನ್. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಜಾತಕ ಬಿಚ್ಚಿಡಲು ಆರ್ಟಿಓ ಹೊಸ ಅಸ್ತ್ರ ರೂಲ್ಸ್ ಫಾಲೋ ಮಾಡದವರ ಗ್ರಹಚಾರ ಬಿಡಿಸೋಕೆ ಎಐ ಕ್ಯಾಮರಾ ಅಳವಡಿಕೆಗೆ ಸಿದ್ದತೆಎಐ ಕ್ಯಾಮರಾ ವಾಹನದ ವೇಗ,ಶಿಸ್ತು ಉಲ್ಲಂಘನೆ, ಚಾಲಕರ ಸೀಟ್ ಬೆಲ್ಟ್ ,ಸೇರಿದಂತೆ ಟ್ರಾಫಿಕ್ ರೂಲ್ಸ್  ಮಾಡಿದ ವಾಹನ ನಂಬರ್ ಪ್ಲೇಟ್ ಸಮೇತ ಕ್ಯಾಪ್ಚರ್..

200-250 ಮೀಟರ್ ದೂರದವರೆಗೆ ದೃಶ್ಯಾವಳಿ ಸೆರೆ ಹಿಡಿಯುವ ಸಾಮರ್ಥ್ಯ ಎಐ ಕ್ಯಾಮರಾ ಇದೆ. ಬೆಂಗಳೂರಿನ ವಿವಿಧ ಕಡೆ ಎಐ ಕ್ಯಾಮರಾ ಅಳವಡಿಕೆಗೆ ಪ್ಲಾನ್  ಮಾಡಲಾಗಿದ್ದು ಕ್ಯಾಮರಾ ಗಳನ್ನ ಸಾರಥಿ 4 ಹಾಗೂ ವಾಹನ್ 4 ತಾಂತ್ರಾಂಶದ ಜೊತೆ ಕನೆಕ್ಟ್ ಮಾಡಲಾಗಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ,ರಾಷ್ಟ್ರೀಯ ಹೆದ್ದಾರಿ 7- ದೇವನಹಳ್ಳಿ ಟೋಲ್ ಗೇಟ್,ತುಮಕೂರು ರಸ್ತೆ ಹೊಸೂರು ರಸ್ತೆ, ಅತ್ತಿಬೆಲೆ ಬಳಿ ಸೇರಿ ಇತರೆ ಕಡೆ ಎಐ ಕ್ಯಾಮರಾ ಆಳವಡಿಕೆಗೆ ಸೂಚಿಸಲಾಗಿದೆ


Spread the love