Spread the love

ನವದೆಹಲಿ: ಭ್ರೂಣವು “ಜೀವಂತವಿದೆ” ಅಂದರೆ ಅದು ಬದುಕುಳಿಯುವ ಕುರುಹು ತೋರಿಸುತ್ತದೆ ಎಂದು ಸೂಚಿಸುವ ವೈದ್ಯಕೀಯ ವರದಿಯನ್ನು ಸರ್ಕಾರ ಸಲ್ಲಿಸಿದ ನಂತರ 26 ವಾರಗಳ ಗರ್ಭಪಾತಕ್ಕೆ (Abortion) ಅನುಮತಿ ನೀಡುವ ಆದೇಶವನ್ನು ಸುಪ್ರೀಂಕೋರ್ಟ್ (Supreme Court) ತಡೆಹಿಡಿದಿದೆ. ತನ್ನ ಆದೇಶವನ್ನು ಹಿಂಪಡೆಯಲು ಸರ್ಕಾರದ ಮನವಿಯನ್ನು ಆಲಿಸಿದ ನ್ಯಾಯಾಲಯ, ಹೊಸ ಆದೇಶವನ್ನು ಅಂಗೀಕರಿಸುವ ಮೊದಲು ಮಹಿಳೆಯಿಂದ ಕೇಳಲು ಬಯಸುವುದಾಗಿ ಹೇಳಿದೆ. ಬುಧವಾರ  ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಪುನರಾರಂಭವಾಗಲಿದೆ.

ಮಂಗಳವಾರ ಗರ್ಭಪಾತ ಅನುಮತಿಸಿದ ಉಚ್ಛ ನ್ಯಾಯಾಲಯವು ಕೊನೆಯ ಕ್ಷಣದ AIIMS ವರದಿಯಿಂದ ಕೆರಳಿದ್ದು, ಅದನ್ನುಯಾಕ ಬೇಗ ಪ್ರಸ್ತುತಪಡಿಸಲಿಲ್ಲ ಎಂದು ಕೇಳಿತು. “ನಮ್ಮ ಆದೇಶದ ನಂತರವೇ ಏಕೆ? ಅವರು ಮೊದಲು ಏಕೆ ಹೇಳಿಲ್ಲ? ಹೃದಯ ಬಡಿತವಿರುವ ಭ್ರೂಣವನ್ನು ತೆಗೆಯಲು ಯಾವ ನ್ಯಾಯಾಲಯ ಬಯಸುತ್ತದೆ? ಖಂಡಿತವಾಗಿಯೂ ನಾವು ಆ ರೀತಿ ಮಾಡಲ್ಲ ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದರು.

ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮತ್ತು ಪ್ರಸವಪೂರ್ವ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದ ನಂತರ ಸುಪ್ರೀಂ ಕೋರ್ಟ್‌ನ ವಿಭಿನ್ನ ಪೀಠವು ದಂಪತಿಗೆ ತಮ್ಮ 26 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಮಹಿಳೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ತಾನು ಈಗಾಗಲೇ ತನ್ನ ಎರಡನೇ ಮಗುವಿಗೆ ಹಾಲುಣಿಸುವಾಗ ಮೂರನೇ ಮಗುವನ್ನು ಬೆಳೆಸುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

 


Spread the love