Spread the love

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಸುದ್ದಿ ಸಂಸ್ಥೆ ದೇಶದ ಪ್ರಮುಖ ಸುದ್ದಿ ಸಂಸ್ಥೆಯಾದ ಏಷಿಯನ್ ನ್ಯೂಸ್ ಇಂಟರ್ ನ್ಯಾಷನಲ್ (ANI) ಮತ್ತು ಸುದ್ದಿ ವಾಹಿನಿ ಎನ್ ಡಿ ಟಿವಿಯ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದೆ.

ಟ್ವಿಟರ್ ಖಾತೆಯನ್ನು ನಿರ್ವಹಿಸಲು ಅಗತ್ಯವಿರುವ ವಯಸ್ಸಿನ ನಿಯಮವನ್ನು ಉಲ್ಲಂಘಿಸಿರುವುದರಿಂದ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

 

ಎಎನ್‌ಐ ಸುದ್ದಿ ಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಟ್ವಿಟರ್ ಪೋಸ್ಟ್ ನಲ್ಲಿ ಈ ಬಗ್ಗೆ ವಿಷಯ ಹಂಚಿಕೊಂಡಿದ್ದು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ.

“ಎಎನ್‌ಐ ಫಾಲೋ ಮಾಡುವವರಿಗೆ ಕೆಟ್ಟ ಸುದ್ದಿ. ಟ್ವಿಟರ್ ನಲ್ಲಿ 7.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಸುದ್ದಿ ಸಂಸ್ಥೆಯನ್ನು ಲಾಕ್ ಮಾಡಿದ್ದಾರೆ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಟ್ವಿಟರ್ ಖಾತೆ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಈ ಮೇಲ್ ಅನ್ನು ಕಳುಹಿಸಿದ್ದಾರೆ. ಮೊದಲು ನಮ್ಮ ಗೋಲ್ಡ್ ಟಿಕ್ ಅನ್ನು ಹಿಂಪಡೆಯಲಾಯಿತು. ಅದಕ್ಕೆ ಬದಲಾಗಿ ನೀಲಿ ಟಿಕ್ ಅನ್ನು ಹಾಕಲಾಯಿತು ಮತ್ತು ಈಗ ಟ್ಟಿಟರ್ ಖಾತೆಯಲ್ಲೇ ಲಾಕ್ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಅವರು ಟ್ವಿಟರ್ ಸಂದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡು ಈ ವಿಷಯ ತಿಳಿಸಿದ್ದಾರೆ. ಇದರ ನಂತರ ಸ್ಮಿತಾ ಪ್ರಕಾಶ್ ಸುದ್ದಿ ಸಂಸ್ಥೆ NDTV ಯ ಟ್ವಿಟರ್ ಖಾತೆಯನ್ನೂ ಸಹ ನಿರ್ಬಂಧಿಸಲಾಗಿದೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.


Spread the love