ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವುದು. ಹಾಗಾಗಿ ಆರಂಭದಲ್ಲಿಯೇ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.
ಅದಕ್ಕಾಗಿ ಮಲಬದ್ಧತೆಗೆ ಕಾರಣವಾಗುವ ಈ ಆಹಾರದಿಂದ ದೂರವಿರಿ.
*ಆಲ್ಕೋಹಾಲ್ ಸೇವನೆ ಮಲಬದ್ಧತೆಗೆ ಕಾರಣವಾಗುತ್ತದೆ. ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಲ್ಕೋಹಾಲ್ ತ್ಯಜಿಸಿ.
*ಸಂಸ್ಕರಿಸಿದ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳಾದ ಬಿಳಿ ಅಕ್ಕಿ, ಪಾಸ್ಟಾ, ಬಿಳಿ ಬ್ರೆಡ್ ಮಲಬದ್ಧತೆಗೆ ಕಾರಣವಾಗುತ್ತದೆ. ಇವುಗಳಲ್ಲಿ ಕಡಿಮೆ ಫೈಬರ್ ಅಂಶವಿದೆ. ಹಾಗಾಗಿ ಇವುಗಳನ್ನು ಹೆಚ್ಚು ಸೇವಿಸಬೇಡಿ.
*ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
*ಕೆಂಪು ಮಾಂಸದಲ್ಲಿ ಅಧಿಕ ಕೊಬ್ಬು ಮತ್ತು ಫೈಬರ್ ಕಡಮೆ ಇರುತ್ತದೆ. ಇದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.
*ಅಂಟು ಅಂಟಾದ ಆಹಾರಗಳನ್ನು ಹೆಚ್ಚು ಸೇವಿಸಬೇಡಿ. ಇದು ಮಲಬದ್ಧತೆ ಸಮಸ್ಯೆಯನ್ನುಂಟು ಮಾಡುತ್ತದೆ.
*ಹುರಿದ ಆಹಾರದಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಹುರಿದ ಆಹಾರಗಳಿಂದ ದೂರವಿರಿ.