Spread the love

ಪ್ಯಾರಿಸ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಅಬಯಾ (Abaya) ಉಡುಪನ್ನು ಶಾಲೆಗಳಲ್ಲಿ ಧರಿಸುವುದನ್ನು ಫ್ರೆಂಚ್ (French) ಅಧಿಕಾರಿಗಳು ನಿಷೇಧಿಸಲಿದ್ದಾರೆ ಎಂದು ಅಲ್ಲಿನ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಅಬಯಾ ಉಡುಪು ಫ್ರಾನ್ಸ್‌ (France) ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನನ್ನು ಉಲ್ಲಂಘಿಸಿದೆ ಎಂದು ವಾದಿಸಿದ ಅವರು, ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು ಅವಕಾಶವಿರುವುದಿಲ್ಲ.

ಸೆಪ್ಟೆಂಬರ್ 4 ರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ತರುವುದಾಗಿ ಹೇಳಿದ್ದಾರೆ. ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುವುದನ್ನು ದೀರ್ಘಕಾಲದಿಂದ ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಅಬಯಾಗಳನ್ನು ಧರಿಸುವ ಕುರಿತು ಹಲವು ತಿಂಗಳಿನಿಂದ ಚರ್ಚೆ ನಡೆದಿದೆ. ಬಲಪಂಥೀಯರು ಅಬಯಾ ನಿಷೇಧಕ್ಕೆ ಒತ್ತಾಯಿಸಿದರೆ, ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿದ್ದಾರೆ.

ಈ ವಿಚಾರವಾಗಿ ಶಿಕ್ಷಕರು ಮತ್ತು ಪೋಷಕರ ನಡುವೆ ಶಾಲೆಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ ಅವರ ಉಡುಪುಗಳಿಂದಾಗಿ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು. ಈ ಹಿನ್ನೆಲೆ 2004ರ ಮಾರ್ಚ್‌ನಲ್ಲಿ ಕಾನೂನು ಶಾಲೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಸಂಬಂಧಿತ ಚಿಹ್ನೆಗಳನ್ನು ತೋರ್ಪಡಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿತು.


Spread the love