Spread the love

ಧಾರವಾಡ: ಚೈತ್ರಾ ಕುಂದಾಪುರ ವಂಚನೆ ಮಾಡಿಲ್ಲ ಎಂಬ ನಂಬಿಕೆ ನನಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚೈತ್ರಾ ಕುಂದಾಪುರ ಪರ ನಿಂತು ಅಚ್ಚರಿ ಮೂಡಿಸಿದ್ದಾರೆ. ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಹೀಗೆ ವಂಚಿಸಿರಲಿಕ್ಕಿಲ್ಲ. ಇದರಲ್ಲಿ ಏನೋ ಷಡ್ಯಂತ್ರ ನಡೆದಿದೆ ಸಂಪೂರ್ಣ ತನಿಖೆ ನಡೆದರೆ ಚೈತ್ರಾ ಕುಂದಾಪುರ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಬಂದನಂತರ ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಹೆಚ್ಚಳವಾಗಿದೆ. ಈ ಪ್ರಕರಣದಲ್ಲೂ ಕೂಡ ಚೈತ್ರಾ ಕುಂದಾಪುರ ಮತ್ತು ಕಾರ್ಯಕರ್ತರನ್ನು ಸಿಲುಕಿಸುವ ಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಮುಂದುವರಿದು, ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ನವರು ಬಜರಂಗದಳ ನಿಷೇಧ,

ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಹೇಳಿದ್ದರು. ಇದೀಗ ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಷಡ್ಯಂತ್ರ ನಡೆದಿರುವುದು ಮೇಲ್ನೋಟ ಕಾಣಿಸುತ್ತಿದೆ. ಗೋರಕ್ಷಕ ಪುನೀತ್ ಕೆರೆಹಳ್ಳಿ ಮೇಲೆ ಸುಖಾಸುಮ್ಮನೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಇದೀಗ ಕಾಯ್ದೆ ರದ್ದಾಗಿ ಬಿಡುಗಡೆಯಾಗಿದ್ದಾರೆ. ಹಾಗಾದರೆ ಅವರವಿರುದ್ಧ ಸುಳ್ಳು ಕಾಯ್ದೆ ಹಾಕಿದವರಿಗೆ ಯಾವ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.

Spread the love