Spread the love

ಟೀಮ್ ಇಂಡಿಯಾ ಮನೆಯಂಗಣದಲ್ಲಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಮಹತ್ವದ ಸರಣಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಭಾರತದ ಎರಡು ತಂಡಗಳನ್ನು ಆಯ್ಕೆ ಮಾಡಲಿದೆ.

ಸೆಪ್ಟೆಂಬರ್‌ 22ರಂದು ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಸೆ.26ರಂದು ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್‌ ಶರ್ಮಾ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ತನ್ನ ಬಲಿಷ್ಠ ಪ್ಲೇಯಿಂಗ್‌ 11 ಕಣಕ್ಕಿಳಿಸಲಿದೆ. ಆದರೆ, ಮೊದಲ 2 ಪಂದ್ಯಗಳಿಗೆ ಭಾರತ ತಂಡದ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹದು ಎಂಬುದರ ಬಗ್ಗೆ ವಿವರ ಇಲ್ಲಿದೆ

ಮೊದಲೆರಡು ಪಂದ್ಯಕ್ಕೆ ಭಾರತದ ಅತ್ಯುತ್ತಮ ಪ್ಲೇಯಿಂಗ್‌ 11

01. ಶುಭಮನ್ ಗಿಲ್‌ (ಓಪನರ್‌)
02. ಋತುರಾಜ್‌ ಗಾಯಕ್ವಾಡ್‌ (ಓಪನರ್‌)
03. ತಿಲಕ್ ವರ್ಮಾ (ಬ್ಯಾಟರ್‌)
04. ಕೆಎಲ್‌ ರಾಹುಲ್‌ (ವಿಕೆಟ್‌ಕೀಪರ್/ ಕ್ಯಾಪ್ಟನ್‌)
05. ಇಶಾನ್‌ ಕಿಶನ್‌ (ಬ್ಯಾಟರ್‌)
06. ರವೀಂದ್ರ ಜಡೇಜಾ (ಆಲ್‌ರೌಂಡರ್‌)
07. ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)
08. ರವಿಚಂದ್ರನ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌)
09. ಶಾರ್ದುಲ್ ಠಾಕೂರ್‌ (ಆಲ್‌ರೌಂಡರ್‌)
10. ಮೊಹಮ್ಮದ್‌ ಶಮಿ (ಬಲಗೈ ವೇಗಿ)
11. ಮೊಹಮ್ಮದ್ ಸಿರಾಜ್‌ (ಬಲಗೈ ವೇಗಿ)

ಭಾರತ vs ಆಸ್ಟ್ರೇಲಿಯಾ: ಒಡಿಐ ಸರಣಿ ವೇಳಾಪಟ್ಟಿ

ಮೊದಲ ಒಡಿಐ ಮೊಹಾಲಿ, 22 ಸೆಪ್ಟೆಂಬರ್
ಎರಡನೇ ಒಡಿಐ ಇಂದೋರ್, 24 ಸೆಪ್ಟೆಂಬರ್
ಮೂರನೇ ಒಡಿಐ ರಾಜ್‌ಕೋಟ್, 26 ಸೆಪ್ಟೆಂಬರ್

ಮೂರೂ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಶುರುವಾಗಲಿವೆ


Spread the love