ಕಾವೇರಿಗಾಗಿ ಇಂದು ಅಖಂಡ ‘ಕರ್ನಾಟಕ ಬಂದ್ ಹಿನ್ನೆಲೆ, ಇಡೀ ಸ್ಯಾಂಡಲ್ ವುಡ್ ಬೆಂಬಲ ವ್ಯಕ್ತಪಡಿಸಿದೆ. ಕಾವೇರಿ ನೀರಿಗಾಗಿ ಒಂದೇ ಸೂರಿನಡಿ ‘ಸ್ಯಾಂಡಲ್ ವುಡ್’ ಒಗ್ಗೂಡಿದ್ದು, ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
‘ಕಾವೇರಿ ನಮ್ಮದು’ ಎಂಬ ಘೋಷಣೆ ವಾಕ್ಯದಡಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರತಿಭಟನೆಗೆ ಎಲ್ಲಾ ಸ್ಟಾರ್ ಗಳು ಬರ್ತಾರಾ ಎಂಬ ಪ್ರಶ್ನೆ ಮೂಡಿದೆ. ಫಿಲಂ ಚೇಂಬರ್ ಮುಂದೆ ಸ್ಟಾರ್ ಗಳ ಪ್ರತಿಭಟನೆ ನಡೆಯಲಿದೆ.
ಕಾವೇರಿ ನೀರಿಗಾಗಿ ಚಿತ್ರರಂಗದ ಪ್ರತ್ಯೇಕ ಹೋರಾಟ ನಡೆಸುತ್ತಿದ್ದು, ‘ಕರ್ನಾಟಕ ಬಂದ್’ಗೆ ನಟ-ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ್ಯಂತ ಥಿಯೇಟರ್ ಗಳು ಬಂದ್ ಆಗಿದ್ದು, ಇಂದು ಯಾವುದೇ ಸಿನಿಮಾ ಪ್ರದರ್ಶನವಿಲ್ಲ. ಸಂಜೆಯ ನಂತರ ಶೋಗಳು ಚಾಲೂ ಆಗಲಿದೆ.
ಶೂಟಿಂಗ್, ಸ್ಟುಡಿಯೋ ಹಾಗೂ ಚಿತ್ರರಂಗದ ಎಲ್ಲ ಕೆಲಸಗಳು ಸ್ಥಗಿತವಾಗಿದ್ದು, ರ್ಯಾಲಿಯಲ್ಲಿ ನಟರು ಪಾಲ್ಗೊಳ್ಳಲಿದ್ದಾರೆ. ಕಾವೇರಿ ಹೋರಾಟಕ್ಕೆ ಚಿತ್ರೋದ್ಯಮದ ಬಲ ಇದ್ದು, ಫಿಲಂ ಚೇಂಬರ್ ನಿಂದ ಟೌನ್ ಹಾಲ್ ವರೆಗೆ ರಾಲಿ ನಡೆಯಲಿದೆ. ಚಿತ್ರರಂಗದ ಪ್ರತಿಭಟನೆಯನ್ನು ಶಿವಣ್ಣ ಮುನ್ನಡೆಸಲಿದ್ದಾರೆ.
ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದ ಪ್ರತ್ಯೇಕ
ಪ್ರತಿಭಟನೆ ನಡೆಯಲಿದ್ದು, ಗುರುರಾಜ ಕಲ್ಯಾಣ ಮಂಟಪದ ಬಳಿ ಪ್ರತಿಭಟನೆಗೆ ಚಿತ್ರರಂಗ ಸಜ್ಜಾಗಿದೆ. ಬೆಳಗ್ಗೆ 10 ಗಂಟಗೆ ಫಿಲ್ಮ್ ಚೇಂಬರ್ ಬಳಿ ಚಿತ್ರರಂಗ ಸೇರಲಿದೆ. ಕನ್ನಡಪರ ಸಂಘಟನೆಗಳ ಪಾದಯಾತ್ರೆಯಿಂದ ಚಿತ್ರರಂಗ ದೂರ ಉಳಿದಿದೆ.
ಶಿವರಾಜ್ ಕುಮಾರ್,ಧ್ರುವ ಸರ್ಜಾ,ನಿಖಿಲ್ ಕುಮಾರ್,
ವಿನೋಧ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಕೋಮಲ್, ಶೃತಿ, ಸುಧಾರಾಣಿ,ತಾರ,ಸೇರಿದಂತೆ ಕಿರುತೆರೆ ಕಲಾವಿದರು ಭಾಗಿಯಾಗೋ ಸಾಧ್ಯತೆ ಇದೆ. ಇನ್ನೂ ಸುದೀಪ್, ದರ್ಶನ್ ನೈತಿಕ ಬೆಂಬಲ ನೀಡಿದ್ದಾರೆ. ಆದರೆ ಕಾವೇರಿ ವಿಚಾರವಾಗಿ ಈ ವರೆಗೂ ರಾಕಿಂಗ್ ಸ್ಟಾರ್ ಯಶ್ ಮಾತನಾಡಿಲ್ಲ. ಇದು ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಖಂಡ ಕರ್ನಾಟಕ ಬಂದ್ ಹಿನ್ನಲೆ ಚಿತ್ರರಂಗದ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ. ಗುರುರಾಜ ಕಲ್ಯಾಣ ಮಂಟಪದ ಬಳಿ ವೇದಿಕೆ ಸಿದ್ಧವಾಗಿದೆ. ಪ್ರತಿಭಟನೆಯಲ್ಲಿ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗೋ ಸಾಧ್ಯತೆ ಇದ್ದು, ಕಲ್ಯಾಣ ಮಂಟಪದ ಬಳಿ ಸ್ಟೇಜ್ ವ್ಯವಸ್ಥೆ ಮಾಡಲಾಗಿದೆ ಫಿಲ್ಮ್ ಚೇಂಬರ್ 400ಚೇರ್ ಗಳ ವ್ಯವಸ್ಥೆ ಮಾಡಿಸಿದೆ.