Spread the love

ಬೆಂಗಳೂರು;- ನಟ ನಾಗಭೂಷಣ್ ಕಾರಿಗೆ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಅಪಘಾತದ ಅಸಲಿಯತ್ತು ಬಯಲಾಗಿದೆ.

ನಟ ನಾಗಭೂಷಣ್ ಅವರು ಹೊಸದಾಗಿ ಕಾರು ಖರೀದಿಸಿದ್ದರು. ಕಾರು ಓಡಿಸುತ್ತಿದ್ದಾಗ ನಾಗಭೂಷಣ್ ನಿಯಂತ್ರಣ ‌ಕಾರು ಸಿಕ್ಕಿರಲಿಲ್ಲ. 70 ರಿಂದ 80 ಕಿಮೀ ವೇಗದಲ್ಲಿದ್ದ ಕಾರು, ರಸ್ತೆಯಲ್ಲಿ ಹಂಪ್ಸ್ ಇದ್ರೂ ಕಾರು ಸ್ಲೋ ಆಗಿರಲಿಲ್ಲ. ಕಂಟ್ರೋಲ್ ಸಿಗದೆ ಪುಟ್ ಪಾತ್ ಗೆ ನುಗ್ಗಿದೆ. ಇದೇ ವೇಳೆ ವಾಕ್ ಮಾಡುತ್ತಿದ್ದ ಕೃಷ್ಣ,ಪ್ರೇಮಾ ದಂಪತಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಪ್ರೇಮಾ ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಅಪಘಾತವೆಸಗಿ ನಾಗಭೂಷಣ್ ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಮುಂದೆ ದಂಪತಿ ಫುಟ್ ಪಾತ್ ಬಿಟ್ಟು ರಸ್ತೆಗೆ ಬಂದಿದ್ದಕ್ಕೆ ಅಪಘಾತವಾಗಿದೆ ಎಂದು ನಾಗಭೂಷಣ್ ಹೇಳಿದ್ದ.

ಪೊಲೀಸರ ತನಿಖೆಯಲ್ಲಿ ದಂಪತಿ ರಸ್ತೆಗೆ ಬಂದಿರಲಿಲ್ಲ ಎಂಬುದು ಪತ್ತೆಯಾಗಿದೆ. ನಾಗಭೂಷಣ್ ಕಾರು
ಫುಟ್ ಪಾತ್ ಗೆ ನುಗ್ಗಿ ಅಪಘಾತವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ನಾಗಭೂಷಣ್ ವಿರುದ್ಧ ಶೀಘ್ರದಲ್ಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

 


Spread the love