ಮಂಡ್ಯ;- ಕಾವೇರಿ ಕೊಳ್ಳದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಮಳೆ ಹಿನ್ನಲೆ, ಕೆ.ಆರ್. ಎಸ್ ಡ್ಯಾಂನ ಒಳ ಹರಿವು ಪ್ರಮಾಣ ಏರಿಕೆ ಆಗಿದೆ.
ಇಂದು ಡ್ಯಾಂಗೆ 9052 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನಿಂದ 1482 ಕ್ಯೂಸೆಕ್ ಹೊರಹರಿವು ಹೆಚ್ಚಾಗಿದೆ. ನಿನ್ನೆ 99.54 ಅಡಿ ಇದ್ದ ನೀರಿನ ಮಟ್ಟ ಇಂದು 100.36 ಅಡಿಗೆ ನೀರಿನ ಮಟ್ಟ ಏರಿಕೆ ಆಗಿದೆ. 49.542 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 23.095 ಟಿಎಂಸಿ ನೀರು ಸಂಗ್ರಹವಾಗಿದ್ದು, ಅತ್ತ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿದಿದೆ.
ಕೆ.ಆರ್.ಎಸ್ ಜೊತೆ ಕಬಿನಿ ಡ್ಯಾಂನಿಂದಲೂ ನೀರು ಬಿಡುಗಡೆ ಆಗಿದ್ದು, ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಯುತ್ತಿದೆ.
ಕೆ.ಆರ್.ಎಸ್ ಡ್ಯಾಂ ನ ನೀರಿನ ಮಟ್ಟ;
ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 100.36 ಅಡಿ
ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
ಇಂದಿನ ಸಾಮರ್ಥ್ಯ- 23.095 ಟಿಎಂಸಿ
ಒಳಹರಿವು- 9052 ಕ್ಯೂಸೆಕ್
ಹೊರಹರಿವು- 1482 ಕ್ಯೂಸೆಕ್.
ಕೆ.ಆರ್.ಸಾಗರ ಅಣೆಕಟ್ಟೆಯ
ನೀರಿನ ಮಟ್ಟ: 100.36
ಒಳಹರಿವು : 9052
ಹೊರಹರಿವು : 1482
ಸಂಗ್ರಹ. : 23.095