Spread the love

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪ್ರೇಮಿಗಳಿಬ್ಬರ ನಡುವೆ ಉಂಟಾದ ಜಗಳ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ನಡೆದಿದೆ. ನೇಪಾಳ ಮೂಲದ 23 ವರ್ಷದ ಕೃಷ್ಣಕುಮಾರಿ ಕೊಲೆಯಾದ ಯುವತಿ ಎಂದು ಗುರುತಿಸಲಾಗಿದ್ದು, ನೇಪಾಳ ಮೂಲದ 27 ವರ್ಷದ ಸಂತೋಷ್ ದಾಮಿಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.ಮೃತ ಕೃಷ್ಣಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾ ದಲ್ಲಿ ಬ್ಯೂಟಿಷಿಯನ್ ಆಗಿದ್ದು,

ಸಂತೋಷ್ ಕೂಡ ಟಿಸಿಪಾಳ್ಯದಲ್ಲಿನ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಹೀಗೆ ಪರಿಚಯವಾಗಿ ಪ್ರೇಮಾಂಕುರ ವಾಗಿತ್ತು. ಈ ಹಿನ್ನೆಲೆ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ಕ್ಷುಲ್ಲಕ ಕಾರಣಕ್ಕೆ ಇಂದು ಬೆಳಿಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆ ಜಗಳ ಜಗಳತಾರಕ್ಕೇರಿದ್ದು ಕೃಷ್ಣಕುಮಾರಿ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸಂಬಂಧ ರಾಮೂರ್ತಿನಗರ ಪೊಲೀಸರು ಸ್ಥಳಕ್ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love

By admin