Spread the love

ದೇಹದ ತೂಕ ಇಳಿಸಲು ನಿಮ್ಮ ಊಟ, ತಿಂಡಿ, ನಿದ್ರೆಯ ಸಮಯವೂ ಬಹು ಮುಖ್ಯವಾಗುತ್ತದೆ. ಅದು ಹೇಗೆನ್ನುತ್ತೀರಾ..?
ತೂಕ ಇಳಿಸುವ ಪ್ರಕ್ರಿಯೆಯಿರಲಿ ಅಥವಾ ಹೆಚ್ಚಿಸುವ ಪ್ರಕ್ರಿಯೆ ಇರಲಿ, ನಿಮ್ಮ ಊಟದ ಅವಧಿಯೂ ಬಹುಮುಖ್ಯವಾಗುತ್ತದೆ.

ಹೈ ಕ್ಯಾಲೊರಿ ಆಹಾರ ಸೇವಿಸಿದ ಬಳಿಕ ಕ್ಯಾಲೊರಿ ಬರ್ನ್ ಅಗುವಷ್ಟು ವ್ಯಾಯಾಮ ದೇಹಕ್ಕೆ ಸಿಗದಿದ್ದರೆ ಆಗ ದೇಹ ದಪ್ಪಗಾಗತೊಡಗುತ್ತದೆ.

 

ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಆಹಾರವೆಂದೇ ಸೇವಿಸಿ. ಇದು ನಿಮ್ಮ ಚಯಾಪಚಯ ಕ್ರಿಯೆ ಆರಂಭವಾಗಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಹೆಚ್ಚಿನ ಪ್ರೊಟೀನ್ ಇರುವ ಆಹಾರ ಬೇಕು. ರಾತ್ರಿಯ ಆಹಾರ ತಿಂದ ಬಳಿಕ 12 ಗಂಟೆಯ ಅಂತರದ ಬಳಿಕ ಬೆಳಗಿನ ಆಹಾರ ಸೇವಿಸಲೇಬೇಕು. ತೂಕ ಇಳಿಸಿಕೊಳ್ಳಲು ಬಯಸುವವರು 12 ಗಂಟೆಯ ಅಂತರ ಪಾಲಿಸುವುದು ಬಹಳ ಮುಖ್ಯ.

ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿಬಿಸಿ ನೀರು ಕುಡಿಯಿರಿ. 30 ನಿಮಿಷದ ಬಳಿಕ ಉಪಾಹಾರ ಸೇವಿಸಿ. ಮಧ್ಯಾಹ್ನದ ಊಟ ಹೆಚ್ಚು ಅಥವಾ ಕಡಿಮೆ ಮಾಡಿದರೆ ಹೆಚ್ಚು ವ್ಯತ್ಯಾಸ ಕಾಣದು. ಮಧ್ಯಾಹ್ನ 1.30ರ ಒಳಗೆ ಊಟ ಮುಗಿಸುವುದು ಮಾತ್ರ ಮುಖ್ಯ.

ರಾತ್ರಿ ಊಟ 8 ಗಂಟೆಗಾದರೆ ಬಹಳ ಒಳ್ಳೆಯದು. ಮಲಗುವ ಕನಿಷ್ಠ 2 ಗಂಟೆ ಮೊದಲು ರಾತ್ರಿಯೂಟ ಮಾಡಬೇಕು. ಇದರಿಂದ ಕ್ಯಾಲರಿ ಬರ್ನ್ ಅಗುತ್ತದೆ. ಊಟ ಮಾಡಿ ಸೀದಾ ಮಲಗುವ ಬದಲು ಸ್ವಲ್ಪ ಕೆಲಸ ಮಾಡಿ. ಇದರಿಂದ ಅಜೀರ್ಣ ಸಮಸ್ಯೆಯೂ ಕಾಡದು.


Spread the love

By admin