ಮೊರೊಕ್ಕೊ ಫುಟ್‌ಬಾಲ್ ಆಟಗಾರರು ‘ಸಜ್ದಾ ಅಲ್ ಶುಕ್ರ್’ ಅನ್ನು ಅರ್ಪಿಸಿದರು. ಅಂದರೆ ವಿಶ್ವಕಪ್ 2022 ರ ಸೆಮಿ-ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಸೋಲು ಕಂಡ ನಂತರ ನೆಲದ ಮೇಲೆ ಕೃತಜ್ಞತೆಯ ನಮನ ಸಲ್ಲಿಸಿದ್ದು, ಅವರ ಪ್ರಾರ್ಥನೆಯ ಚಿತ್ರವು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಫ್ರಾನ್ಸ್‌ಗೆ ಸೋತ ನಂತರ ಮೊರಾಕ್ಕೊ ಆಟಗಾರರು ತಮ್ಮ ಅಭಿಮಾನಿಗಳಿಗೆ ಬೆಂಬಲಕ್ಕಾಗಿ ಪ್ರಾರ್ಥಿಸಿ ಧನ್ಯವಾದ ಹೇಳಿದ್ದಾರೆ. ಈ ಮೊರಾಕೊ ತಂಡವು ವಿಶ್ವಕಪ್ ಗೆಲ್ಲದೇ ಇರಬಹುದು, ಆದರೆ ಅವರು ನಮ್ಮ ಹೃದಯವನ್ನು ಗೆದ್ದಿದ್ದಾರೆ ಎಂದು ಇಎಸ್‌ಪಿಎನ್ ಎಫ್‌ಸಿ ಆಟಗಾರರು ಮೈದಾನದಲ್ಲಿ ಅಲ್ಲಾಗೆ ಮಂಡಿಯೂರಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮೊರೊಕನ್ ಆಟಗಾರರು ಪೋರ್ಚುಗಲ್ ಅನ್ನು ಸೋಲಿಸಿದ ನಂತರ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆದರು, ಈ ಪ್ರಕ್ರಿಯೆಯಲ್ಲಿ, ವಿಶ್ವಕಪ್‌ನ ಕೊನೆಯ 4 ತಲುಪಿದ ಮೊದಲ ಅರಬ್ ರಾಷ್ಟ್ರ ಮತ್ತು ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇದಕ್ಕೂ ಮೊದಲು, ಸ್ಪೇನ್ ವಿರುದ್ಧದ ಗೆಲುವಿನ ನಂತರ ತಂಡವು ವಿಶ್ವಕಪ್ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆದ ನಂತರ, ತಂಡದ ಸದಸ್ಯರು ತಮ್ಮ ಅಭಿಮಾನಿಗಳು ಮತ್ತು ಸಾಮಾನ್ಯ ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಕೇಳಿಕೊಳ್ಳುತ್ತಿದ್ದರು. ವರದಿಗಳ ಪ್ರಕಾರ, ಇಬ್ಬರು ಆಟಗಾರರಾದ ಜಕಾರಿಯಾ ಅಬೌಖಾಲ್ ಮತ್ತು ಅಬ್ದೆಲ್‌ಹಮಿದ್ ಸಬೀರಿ ಅವರು ಸ್ಪೇನ್ ವಿರುದ್ಧದ ಪಂದ್ಯದ ನಂತರ ತಮ್ಮ ಹೋಟೆಲ್‌ಗೆ ಮರಳಿ ಲೈವ್ ಸ್ಟ್ರೀಮ್ ಪ್ರಸಾರ ಮಾಡಿ ಅದರಲ್ಲಿ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ವೀಕ್ಷಕರನ್ನು ಆಹ್ವಾನಿಸಿದರು.
“ಅಲ್ಹಮ್ದುಲಿಲ್ಲಾ. ನಾವು ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದೇವೆ ಮತ್ತು ಇದು ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಇದಕ್ಕೆಲ್ಲಾ ಅಲ್ಲಾ ಕಾರಣ. ಅಲ್ಲಾ-ಹು-ಅಖ್ಬರ್. ನಮ್ಮ ಜೊತೆಗೂಡು. ನಮ್ಮ ಜೊತೆಗೂಡು. ಇಸ್ಲಾಂಗೆ ಸೇರು. ಬನ್ನಿ. ಶಾಂತಿಗೆ ಬನ್ನಿ” ಎಂದು ಆಟಗಾರರು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ.
ಇಬ್ಬರೂ ತಮ್ಮ ಛಾಯಾಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದರು, ಅದರಲ್ಲಿ ಅವರು ಇಸ್ಲಾಂನಲ್ಲಿ ‘ದೇವರಲ್ಲಿ ಏಕತೆ’ಯನ್ನು ಸೂಚಿಸುವ ತಮ್ಮ ತೋರು ಬೆರಳುಗಳನ್ನು ಎತ್ತಿದರು. ಝಕಾರಿಯಾ ಅಬೌಖಾಲ್ ಮತ್ತು ಅಬ್ದೆಲ್‌ಹಮಿದ್ ಸಬೀರಿ ಅವರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ ಮತ್ತು ಕ್ರಮವಾಗಿ “ಅಲ್ಲಾ ಹು ಅಕ್ಬರ್” ಮತ್ತು “ಫ್ರೀಡಮ್” ಎಂದು ಬರೆದಿದ್ದಾರೆ.