Spread the love

ವದೆಹಲಿ: ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೌಕರರಿಗೆ ಸಿಹಿ ಸುದ್ದಿ ಇಲ್ಲಿದೆ. ನೌಕರರ ಕನಿಷ್ಠ ವೇತನದಲ್ಲಿ ಬದಲಾವಣೆಯಾಗುವ ಫಿಟ್ಮೆಂಟ್ ಅಂಶ ಮತ್ತು ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.

 

ಫಿಟ್ಮೆಂಟ್ ಏರಿಕೆಯಾದ ನಂತರ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18,000 ದಿಂದ 26,000 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ನೌಕರರು ಶೇಕಡ 3.68ಕ್ಕೆ ಫಿಟ್ ಮೆಂಟ್ ಹೆಚ್ಚಳ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಡಿಎ ಮತ್ತು ಡಿಆರ್ ಗಳನ್ನು ಜನವರಿ 1 ಹಾಗೂ ಜುಲೈ 1 ರಂತೆ ವರ್ಷಕ್ಕೆ ಎರಡು ಸಲ ಪರಿಷ್ಕರಿಸಲಾಗುವುದು.

2002ರ ಸೆಪ್ಟಂಬರ್ ನಲ್ಲಿ ಕೊನೆಯ ಸಲ ಪರಿಷ್ಕರಣೆಯಾಗಿದ್ದು, 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರಾರಿಗೆ ಶೇಕಡ 4ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು. ಶೇ. 38 ಕ್ಕೆ ಡಿಎ ಹೆಚ್ಚಳವಾಗಿತ್ತು.


Spread the love