Spread the love

ಸ್ಯಾಂಡಲ್ ವುಡ್ ನಲ್ಲಿ ಮಠದ ಹೆಸರಿನಲ್ಲಿ ಮತ್ತೊಂದು ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲು ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಗರಂ ಆಗಿದ್ದಾರೆ.

ನಿರ್ದೇಶಕ ರವೀಂದ್ರ ವಂಶಿ ವಿರುದ್ಧ ಕಾಳಿ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ‘ತಾಕತ್ತು ಇದ್ದರೆ ಹಿಂದೂ ಗುರುಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಚರ್ಚ್ ಫಾದರ್ ಗಳ ಬಗ್ಗೆ ಚಿತ್ರ ಮಾಡಲಿ. ಇವರಿಗೆ ಹಿಂದೂ ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮಠ ಸಿನಿಮಾದಲ್ಲಿ ಏನೆಲ್ಲ ಆವಾಂತರಗಳು ಆಗಿವೆ ಎನ್ನುವುದನ್ನು ಬಲ್ಲೆ ಎಂದರು.

ಹಿಂದೂ ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ದುಡ್ಡು ಮಾಡ್ಬೇಡಿ. ಈ ಸಿನಿಮಾ ರಿಲೀಸ್ ಆಗದಂತೆ ನೋಡಿ ಕೊಳ್ಳಿ ಅಂತ ಸ್ವಾಮಿಜಿಗಳಿಗೆ ರಿಷಿಕುಮಾರ್ ಮನವಿ ಮಾಡಿದ್ದಾರೆ. ಮಠ ಸಿನಿಮಾನ ಮೊದಲು ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಸಲಹೆ ನೀಡಿದ್ದಾರೆ. ಹಿಂದು ಮಠ ಹಿಂದು ಸ್ವಾಮಿಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗ್ತಿದೆ. ಕಲಾವಿದರ ಮೂಲಕ ಮಠಗಳ ಬಗ್ಗೆ ತಪ್ಪು ಹೇಳಿಕೆಗಳನ್ನ ಹೇಳಿಸ್ತಿದ್ದಾರೆ. ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ’ ಎಂದು ಖುಷಿ ಕುಮಾರ್ ಸ್ವಾಮಿಜಿ ಆಕ್ರೋಶ ಹೊರ ಹಾಕಿದ್ದಾರೆ.


Spread the love