Author: prathibhatane

ಕನ್ನಡ, ಕನ್ನಡಿಗರ ಹಿಯಾಳಿಸಿದರೆ ತಕ್ಕ ಶಾಸ್ತಿ:ಸಿಎಂ ಖಡಕ್​ ಎಚ್ಚರಿಕೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ, ಕನ್ನಡಿಗರನ್ನು ಹಿಯಾಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಇದನ್ನು ನಾಡ ದ್ರೋಹವೆಂದು ಪರಿಗಣಿಸಿ ಕಿಡಿಗೇಡಿಗಳ ವಿರುದ್ಧ ನಮ್ಮ ಸರ್ಕಾರ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.   ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ…

ಜಗ್ಗೇಶ್ ಗೆಲುವಿನ ಹಾದಿಗೆ ಮರಳಲು ಕಾರಣವಾಗಿದ್ದೇ ಗುರುಪ್ರಸಾದ್‌

ಕನ್ನಡ ಚಿತ್ರರಂಗಕ್ಕೆ ಅದೇನಾಗಿದೆಯೋ ಗೊತ್ತಿಲ್ಲ, ಒಂದು ಕಡೆ ಒಳ್ಳೆಯ ಸಿನಿಮಾಗಳು ಕೂಡ ಗೆಲ್ಲುತ್ತಿಲ್ಲ, ಮತ್ತೊಂದು ಕಡೆ ನಟ, ನಿರ್ದೇಶಕರ ಸಾಲು ಸಾಲು ಸಾವುಗಳು ನಿಲ್ಲುತ್ತಿಲ್ಲ. ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್ ತಮ್ಮ ಮನೆಯಲ್ಲಿ…

ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಿಡಿಯೋ ಫುಲ್ ವೈರಲ್!

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India) ಹಾಗೂ ಪಾಕ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದ ಬಳಿಕ ಕೊಹ್ಲಿ (Virat Kohli) ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ (Babar…

ಕಿಚ್ಚನ ಪಂಚಾಯತಿಯಲ್ಲಿ ಯಾರಿಗೆಲ್ಲಾ ಕ್ಲಾಸ್ ತೆಗೆದುಕೊಂಡಿದ್ದು ಗೊತ್ತಾ?

Bigg Boss Kannada 10ರ ಕಿಚ್ಚನಮೊದಲ‘ವಾರದಕಥೆಕಿಚ್ಚನಜೊತೆ’ಕಾರ್ಯಕ್ರಮನಡೆಯಲಿದೆ. ಈಗಾಗಲೇವಾಹಿನಿಯುಪ್ರೋಮೋವನ್ನುರಿಲೀಸ್ಮಾಡಿದ್ದು, ಕಿಚ್ಚಆಡಿದಮಾತುಗಳುಸಖತ್ಕುತೂಹಲಮೂಡಿಸಿವೆ. ‘ದೇವರಮುಂದೆನಿಯತ್ತಾಗಿಬೇಡಿಕೊಂಡರೆ, ದೇವರೇಕ್ಷಮಿಸಿಒಂದುವರಕೊಡ್ತಾನೆ’ಎಂದುಹೇಳಲಾದಮಾತುವೈರಲ್ಆಗಿದೆ. ಆಮಾತುಗಳನ್ನುಅವರುಯಾರಿಗೆಹೇಳಿದ್ದಾರೆಎನ್ನುವುದುಪ್ರೊಮೋದಲ್ಲಿಬಳಸಲಾದದೃಶ್ಯಗಳೇಹೇಳುತ್ತವೆ ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯತಿ. ವೀಕೆಂಡ್ ನಲ್ಲಿ ಸುದೀಪ್ (Sudeep) ಜೊತೆ ಮಾತನಾಡೋಕೆ ಬಿಗ್ ಬಾಸ್ ಸ್ಪರ್ಧಿಗಳು ತುದಿಗಾಲಲ್ಲಿ ಕಾಯುತ್ತಾರೆ. ವೀಕೆಂಡ್ ಪಂಚಾಯತಿಯಲ್ಲಿ (Kichana Panchayati) ಭಾಗಿಯಾಗಲೆಂದೇ ಹೊಸ ಹೊಸ ವಿನ್ಯಾಸದ ಕಾಸ್ಟ್ಯೂಮ್ ಅನ್ನೂ ರೆಡಿ ಮಾಡಿಕೊಂಡಿರುತ್ತಾರೆ. ಹಾಗಂತ ಕಿಚ್ಚನ ಪಂಚಾಯತಿ, ಯಾವ ವೇಳೆಯಲ್ಲೇ ಹೇಗೆ ಟರ್ನ್ ಆಗತ್ತೋ ಗೊತ್ತಿಲ್ಲ. ನಗುತ್ತಲೇ ಅಳಿಸುತ್ತಾರೆ, ಅಳಿಸುತ್ತಲೇ ನಗಿಸುತ್ತಾರೆ, ಕೋಪ ಬಂದರೆ ಮುಖಾಮೋತಿ ನೋಡದೇ ಉಗಿದು ಬಿಡುತ್ತಾರೆ ಸುದೀಪ್. ಹಾಗಾಗಿ ಕಿಚ್ಚನ ಪಂಚಾಯತಿಗಾಗಿ ಕಿರುತೆರೆ ಪ್ರೇಕ್ಷಕ ಕೂಡ ಕಾದಿರುತ್ತಾನೆ. ಬಿಗ್ ಬಾಸ್ ಸೀಸನ್ 10ರ ಮೊದಲ ಕಿಚ್ಚನ ಪಂಚಾಯತಿ ಅಂದರೆ, ‘ವಾರದ ಕಥೆ ಕಿಚ್ಚನ ಜೊತೆ’ ಇಂದು ಆರಂಭವಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆದಿದ್ದು, ಮನೆಯಲ್ಲಿದ್ದವರ ಮೇಲೆ ಕಿಚ್ಚ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ ಮನೆಯೊಳಗೆ ಕಂಟೆಸ್ಟೆಂಟ್ ಬಂದು ಕೇವಲ ಒಂದು ವಾರವಾಗಿದೆಯಷ್ಟೆ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇದು ಅತ್ಯಂತ ಕಡಿಮೆ ಸಮಯ. ಆದರೂ, ಡ್ರೋನ್ ಪ್ರತಾಪ್ ಮೇಲೆ ಮನೆಮುಂದಿಯಲ್ಲ ಮುರಿದು ಬಿದ್ದಿದ್ದಾರೆ. ಡ್ರೋನ್‍್ ಪ್ರತಾಪ್ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವಮಾನಿಸುವಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಇವೆಲ್ಲ ಕಿಚ್ಚನ ಕೋಪಕ್ಕೆ ಕಾರಣವಾಗಿವೆ.   ಡ್ರೋನ್ ‍ಪ್ರತಾಪ್ ತಮ್ಮ ನಿಜ ಜೀವನದಲ್ಲಿ ಏನೇ ಇರಲಿ. ಆದರೆ, ಮನೆಗೆ ಬಂದಾಗ ಇತರರಂತೆ ಅವರೂ ಕೂಡ ಸ್ಪರ್ಧಿ. ಸಮಾಜದಲ್ಲಿ ಅವರಿಗೂ ಅವರದ್ದೇ ಆದ ಸ್ಥಾನವಿದೆ. ಅವರ ಖಾಸಗಿ ಬದುಕನ್ನು ಸಾಕಷ್ಟು ರೀತಿಯಲ್ಲಿ ಕೆದಕಿ ಬಿಗ್ ಬಾಸ್ ಮನೆಯಲ್ಲಿ ಅಪಮಾನ ಮಾಡಲಾಗುತ್ತಿದೆ. ಯಾರೆಲ್ಲ ಡ್ರೋನ್ ಪ್ರತಾಪ್‍ ರನ್ನು ಅವಮಾನಿಸಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರಂತೆ ಸುದೀಪ್. ಅಲ್ಲದೇ, ಡ್ರೋನ್ ಅವರಿಗೂ ಕಿಚ್ಚ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ಇಡೀ ಎಪಿಸೋಡ್ ಕೇವಲ ಡ್ರೋನ್ ಸುತ್ತಲೇ ಸುತ್ತಿಲ್ಲ. ಕೆಲವು ಆಟಗಳನ್ನೂ ಸುದೀಪ್ ಆಡಿಸಿದ್ದಾರೆ. ಒಂದು ವಾರಗಳ ಕಾಲ, ಯಾರು ಹೇಗಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ಸರಿ ತಪ್ಪುಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಕೆಲವರನ್ನು ಮೆಚ್ಚಿದ್ದಾರೆ, ಇನ್ನೂ ಕೆಲವರಿಗೆ ಮೆಚ್ಚುವಂತೆ ಇರಿ ಎಂದು ಕಿವಿ ಮಾತೂ ಹೇಳಿದ್ದಾರೆ. ಕಿಚ್ಚನ ಮೊದಲ ಪಂಚಾಯತಿ ಮಿಕ್ಸ್ ಮಸಲಾ ರೀತಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ. ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ, ಮಾತಿನಲ್ಲೇ ತಿವಿಯುತ್ತಾ ವೀಕೆಂಡ್ ಎಪಿಸೋಡ್ ಅನ್ನು ಶೂಟಿಂಗ್ ಮಾಡಿದ್ದಾರಂತೆ ಸುದೀಪ್. ಆದರೆ ಈ ವಾರ, ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬಂದಿದ್ದಾರೆ ಎನ್ನುವುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್.  

ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ: ಹಂಸಲೇಖ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನನ್ನ ನಮನ. ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು. ಯಾರು ಯಾರನ್ನು ನೆನೆಯಾನಾ ? ಯಾರು ಯಾರನ್ನು ನೆನೆಯಲಿ,…

ಪ್ರತಿ ಶೌಚಾಲಯವನ್ನೂ ಹುಡುಕಿ ಗುಂಡು ಹಾರಿಸಿದ್ದ ಜನರನ್ನು ಕೊಂದ ಹಮಾಸ್ ಉಗ್ರರು..!

ಟೆಲ್ ಅವಿವ್: ಇಸ್ರೇಲ್‌ನ ಸಾದ್ ಕಫಾರ್‌ನಲ್ಲಿನ ಕಿಬ್ಬುಟ್ಸ್‌ನಲ್ಲಿ (ಕೃಷಿ ಸಮುದಾಯ) ಇರುವ ಪ್ರಾಥಮಿಕ ಶಾಲೆ ಹಾಗೂ ಯುವಜನ ಕೇಂದ್ರದ ಮೇಲೆ ದಾಳಿ ನಡೆಸಿ, ಸಾಧ್ಯವಾದಷ್ಟು ಜನರನ್ನು ಕೊಲ್ಲುವುದು ಹಾಗೂ ಒತ್ತೆಯಾಳುಗಳನ್ನು ಸೆರೆಹಿಡಿಯುವುದು, ತ್ವರಿತವಾಗಿ ಅವರನ್ನು ಗಾಜಾ ಪಟ್ಟಿಯೊಳಗೆ ಕರೆತರುವುದಕ್ಕೆ ಹಮಾಸ್ ಉಗ್ರ ಸಂಘಟನೆಯು…

ನಾಸಾ ವಿಜ್ಞಾನಿಗಳು ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಯಸಿದ್ದಾರೆ: ಎಸ್.ಸೋಮನಾಥ್

ಚೆನ್ನೈ: ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಅಚ್ಚರಿಯ ವಿಚಾರವನ್ನು ಇಸ್ರೋ (ISRO) ಮುಖ್ಯಸ್ಥ ಎಸ್.ಸೋಮನಾಥ್ (S.Somanath) ತಿಳಿಸಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಅಂಗವಾಗಿ…