Category: ಕ್ರೀಡೆ

ಹೃದಯಾಘಾತದಿಂದ ಕೊನೆಯುಸಿರೆಳೆದ ಆಂಡ್ರೆಸ್ ಬಲಾಂಟ

ಸಾವು ಯಾವಾಗ ಹೇಗೆ ಬೇಕಾದರೂ ಸಂಭವಿಸಬಹುದು. ಇದೀಗ ಅಂತಹದ್ದೇ ಒಂದು ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಕೊಲಂಬಿ ಯಾದ 22 ವರ್ಷದ ಪ್ರತಿಭಾನ್ವಿತ ಫುಟ್ಬಾಲಿಗ ಆಂಡ್ರೆಸ್ ಬಲಾಂಟ ಅಭ್ಯಾಸ ನಡೆಸುತ್ತಿರುವಾಗಲೇ ಕುಸಿದುಬಿದ್ದು ಹೃದಯಸ್ತಂಭ ನದಿಂದ ಕೊನೆಯುಸಿರೆಳೆದಿದ್ದಾರೆ.  ಇದೀಗ ಆಂಡ್ರೆಸ್ ಬಲಾಂಟ ಅವರ ನಿಧನಕ್ಕೆ…

ದಿಗ್ಗಜ ಟೇಬಲ್ ಟೆನಿಸ್ ಪಟು ಶರತ್ ಕಮಲ್ ಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ

ದಿಗ್ಗಜ ಟೇಬಲ್‌ ಟೆನಿಸ್‌ ಆಟಗಾರ ಶರತ್‌ ಕಮಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಷ್ಟ್ರಪತಿ ಭವನದಲ್ಲಿ ನಡೆದ 2022ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ ರತ್ನವನ್ನು ಪ್ರದಾನ ಮಾಡಿದರು. 25 ಲಕ್ಷ ನಗದು,…

ಪ್ರೊ ಕಬಡ್ಡಿ: ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಬುಲ್ಸ್

ಹೈದರಾಬಾದ್‌: 9ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪ್ಲೇ-ಆಫ್‌ಗೇರಲು ಪೈಪೋಟಿ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಬೆಂಗಳೂರು ಬುಲ್ಸ್‌ ದೊಡ್ಡ ಸೋಲು ಕಂಡು ಹಿನ್ನಡೆ ಅನುಭವಿಸಿದೆ. ಜೈಪುರ ಪಿಂಕ್‌ಪ್ಯಾಂಥ​ರ್ಸ್‌ ವಿರುದ್ಧ ಬುಲ್ಸ್‌ 25-45ರಲ್ಲಿ ಶರಣಾಯಿತು. ಕಳೆದ 4 ಪಂದ್ಯಗಳಲ್ಲಿ ತಂಡಕ್ಕಿದು 3ನೇ ಸೋಲು. ಜೈಪುರ ಅಂಕಪಟ್ಟಿಯಲ್ಲಿ ಮೊದಲ…

ಕ್ರಿಸ್ಟಿಯಾನೋ ರೋನಾಲ್ಡೋಗೆ ಬಿಗ್ ಶಾಕ್: ಎರಡು ಪಂದ್ಯದಿಂದ ನಿಷೇಧ

ಫಿಫಾ ವಿಶ್ವಕಪ್ 2022ರ ಟೂರ್ನಿಯಲ್ಲಿ ಪೋರ್ಚುಗಲ್ ತಂಡ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ನಾಯಕತ್ವದ ಪೋರ್ಚುಗಲ್ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ನಾಯಕ ರೋನಾಲ್ಡೋಗೆ ಹಿನ್ನಡೆಯಾಗಿದೆ. ಹಳೆ ಪ್ರಕರಣದಲ್ಲಿ ರೋನಾಲ್ಡೋ…

ಭಾರತ ಎದುರು ಅಜೇಯ ಶತಕ ಸಿಡಿಸಿ ಸಂಭ್ರಮಿಸಿದ ಟಾಮ್ ಲೇಥಮ್

ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟರ್‌ ಟಾಮ್ ಲೇಥಮ್, ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 145 ರನ್ ಸಿಡಿಸುವ ಮೂಲಕ ಎರಡು ದಶಕಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ಟಾಮ್ ಲೇಥಮ್ 121 ರನ್ ಬಾರಿಸುತ್ತಿದ್ದಂತೆಯೇ ಹೊಸತೊಂದು ಮೈಲ್ಲಿಗಲ್ಲು ನೆಟ್ಟಿದ್ದಾರೆ. ಹೌದು, ಟಾಮ್ ಲೇಥಮ್‌, ಇದೀಗ ಭಾರತ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಮಾಡಿದ ನ್ಯೂಜಿಲೆಂಡ್‌ನ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1999ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ನೇಥಮ್ ಆಶ್ಲೆ ಭಾರತ ವಿರುದ್ದ 136 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 120 ರನ್ ಬಾರಿಸಿದ್ದರು. 23 ವರ್ಷಗಳಿಂದಲೂ ಈ ದಾಖಲೆ ನೇಥನ್ ಆಶ್ಲೆ ಹೆಸರಿನಲ್ಲಿಯೇ ಇತ್ತು. ಇದೀಗ ಆ ದಾಖಲೆಯನ್ನು ಟಾಮ್ ಲೇಥಮ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇದೇ ವೇಳೆ ಟಾಮ್ ಲೇಥಮ್, ಭಾರತ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ನ್ಯೂಜಿಲೆಂಡ್ ಬ್ಯಾಟರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಟಾಮ್ ಲೇಥಮ್ ಇಂದು 76 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದರು. ಆದರೆ 1999ರಲ್ಲಿ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕ್ರಿಸ್ ಕ್ರೇನ್ಸ್‌ 75 ಎಸೆತಗಳನ್ನು ಎದುರಿ ಮೂರಂಕಿ ಮೊತ್ತ ದಾಖಲಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 307 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 88 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಮುರಿಯದ 221 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಕಿವೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ನಾಯಕ ಶಿಖರ್ ಧವನ್, ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಬಾರಿಸಿತ್ತು.

ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಇಂದಿನಿಂದ ಆರಂಭವಾಗಲಿದೆ. ತಮ್ಮ ಬೌಲಿಂಗ್ ನಿಂದಲೇ ದೊಡ್ಡ ತಂಡಗಳಿಗೆ ಸವಾಲಾಕುವ ಅಫ್ಘಾನಿಸ್ತಾನ ತಂಡಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಮೇಲ್ಬರಲು ಇದೊಂದು ಉತ್ತಮ ಅವಕಾಶವಾಗಿದೆ.   ಅಫ್ಘಾನಿಸ್ತಾನ ಆಟಗಾರ ಪಟ್ಟಿ ; ಹಸ್ಮತ್ತುಲ್ಲಾ…

ಮಳೆಯಿಂದಾಗಿ ಮೂರನೇ ಟಿ20 ಪಂದ್ಯ ಟೈನಲ್ಲಿ ಅಂತ್ಯ

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಿಂದ ಗೆದ್ದುಕೊಂಡಿದೆ. ನೇಪಿಯರ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯ ಮಳೆಯ ಕಾರಣದಿಂದ ಟೈ ಆಗಿದೆ. ಮೊದಲ ಪಂದ್ಯವೂ ಮಳೆ ಪಾಲಾಗಿತ್ತು, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್‌ಗಳಿಂದ ಜಯಗಳಿಸಿತ್ತು. ಹಾಗಾಗಿ…