Spread the love

ಇಂದು ದಲಿತ ವಿದ್ಯಾರ್ಥಿ ಪರಿಷತ್ ಪಾವಗಡ ತಾಲ್ಲೂಕು ಘಟಕದ ವತಿಯಿಂದ
ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಕೊಳ್ಳಲು ವಿನಂತಿಸುತ್ತಾ
ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ ಜಾತಿವಾದಿ ಮನಸ್ಸಸ್ಥಿತಿಯ ಕೊಳಕು ವ್ಯಕ್ತಿತ್ವ ಹೊಂದಿರುವ ಇವರು ತಮ್ಮ
ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ
ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಇಂತವರು ಯಾವುದೇಕಾರಣಕ್ಕೂ ರಾಗ ದ್ವೇಷ ಭಾವನೆ ಇಲ್ಲದೆ ನ್ಯಾಯ ತಿರ್ಪುನಿಡಲು ಸಾದ್ಯವಿಲ್ಲ ಆದ್ದರಿಂದ ಇವರು ತಮ್ಮ ವೃತ್ತಿಯಲ್ಲಿ ಇಲ್ಲಿಯವರೆಗೆ ನಿಡಿರುವ ಎಲ್ಲಾ ನ್ಯಾಯದಾನದ ತಿರ್ಪುಗಳನ್ನು ಪುನರ್ ಪರಿಶೀಲನೆ ನಡೆಸಬೇಕು ಹಾಗೂ ಇವರನ್ನು ತಕ್ಕ ಶಿಕ್ಷೆಗೆ ಗುರಿಪಡಿಸಿ ನ್ಯಾಯಾಂಗದ ಗೌರವ ಎತ್ತಿಹಿಡಿದು
ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಇವರ ವಿರುದ್ಧ ಸ್ವಯಂಪ್ರೇರಿತವಾಗಿ (su moto) ದೂರು ದಾಖಲಿಸಿಕೊಳ್ಳಬೇಕೆಂದು, ಇನ್ನು ಮುಂದೆ ಈ ರೀತಿಯ ಘಟನೆಗಳು ಪುನರಾವರ್ತಿಸಿ ಬಾಬಾಸಾಹೇಬ್ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರಿಗೆ ಅಗೌರವ ತರುವ ಹಾಗೆ ಮತ್ತು ಸಂವಿಧಾನಕ್ಕೆ ಮತ್ತು ಸಂವಿಧಾನದ ಆಶಯಗಳಿಗೆ ದಕ್ಕೆ ತರುವಂತಹ ಕೆಲಸ ಯಾರೇ ಮಾಡಿದರು ಅವರ ಮೇಲೆ ದೇಶದ್ರೋಹಿ ಕೇಸು ದಾಖಲಿಸುವಂತೆ ಕಾನೂನಿನ ಹೊಸ ನಿಯಮ ಜಾರಿಗೆ ತರುವಂತೆ ಕೊರಿ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಕರ್ನಾಟಕ , ಬೆಂಗಳೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಸಂಚಾಲಕರಾದ ಅಜಿತ್ ಕುಮಾರ್ ಬೆಳ್ಳಿಬಟ್ಲು ಓ ಸೇರಿದಂತೆ
ಡಿವಿಪಿ ಪಾವಗಡ ಶಾಖೆ ಸದಸ್ಯರಾದ ಅಂಜಿ ಆರ್, ಮಹೇಶ್ ನಾಯ್ಕ್ , ಶಶಿ ನಾಯ್ಕ್, ಮಹೇಂದ್ರ ಕುಮಾರ್ ವಿ ಎಸ್, ವೇಣು ಎನ್, ಉಪಸ್ಥಿತರಿದ್ದರು.

Spread the love