ಬೆಂಗಳೂರು, ಫೆ.5: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್, ಜಿಲ್ಲಾ, ತಾಲ್ಲೂಕು ಕೋರ್ಟ್ ಗಳಲ್ಲಿ ಜ.26, ಆ.15, ನ.26ರಂದು ತೆರೆದ ಕೋರ್ಟ್ ಹಾಲ್(ಓಪನ್ ಕೋರ್ಟ್)ನಲ್ಲಿ ಕಡ್ಡಾಯವಾಗಿ ಇಡಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು ಹೈಕೋರ್ಟ್ ಪ್ರಧಾನಪೀಠ, ಕಲಬುರಗಿ, ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಜ.26, ಆ.15, ನ.26ರಂದು ತೆರೆದ ಕೋರ್ಟ್ ಹಾಲ್(ಓಪನ್ ಕೋರ್ಟ್)ನಲ್ಲಿ ಕಡ್ಡಾಯವಾಗಿ ಇಡಲು ಆದೇಶಿಸಲಾಗಿದೆ.
ಅಂಬೇಡ್ಕರ್ ಭಾವಚಿತ್ರವನ್ನು ಹೈಕೋರ್ಟ್ ಸೇರಿ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಅಳವಡಿಸಲು ಕೋರಿ ಹೈಕೋರ್ಟ್ ಗೆ ಈಗಾಗಲೇ ಅರ್ಜಿಯೊಂದು ಸಲ್ಲಿಕೆಯಾಗಿದೆ. ಆ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.