Spread the love

ಬೆಂಗಳೂರು : ಗಣರಾಜ್ಯೋತ್ಸವ ದಿನದಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರನ್ನು ತೆರವುಗೊಳಿಸಿ, ಉದ್ಧಟತನ ಮೆರೆದಿದ್ದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಸಂವಿಧಾನ ಪರ ಸಂಘಟನೆಗಳು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಕರ್ನಾಟಕ ಫೆಬ್ರವರಿ 19ರಂದು ವಿಧಾನ ಸೌಧ-ಹೈಕೋರ್ಟ್ ಚಲೋಗೆ ಕರೆ ನೀಡಿದೆ.

ಫೆಬ್ರವರಿ 19ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನ ಸೌಧ ಚಲೋ-ಹೈಕೋರ್ಟ್ ಚಲೋ ಬೃಹತ್ ಮೆರವಣಿಗೆ ನಡೆಯಲಿದ್ದು, ರಾಜ್ಯದ ಪ್ರಮುಖ ಸಂವಿಧಾನ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಈ ಬೃಹತ್ ಪ್ರತಿಭಟನೆಗೆ ದಲಿತಪರ, ಪ್ರಗತಿಪರ, ರೈತಪರ, ಕನ್ನಡಪರ ಸಂಘಟನೆಗಳಲ್ಲದೆ ವಕೀಲರ ಸಂಘಟನೆ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿದುಬಂದಿದೆ.

ಇನ್ನೂ ಫೆ.19 ರಂದು ಈ ಸಂಬಂಧ ಕರ್ನಾಟಕದ ಪ್ರಮುಖ 31 ಜಿಲ್ಲೆಗಳ ಸಂವಿಧಾನ ಪರ ಸಂಘಟನೆಗಳು ಏಕತಾ ಸಭೆಯಲ್ಲಿ ಭಾಗವಹಿಸಿದ್ದು, ಬೃಹತ್ ಒಗ್ಗಟ್ಟು ಪ್ರದರ್ಶಿಸಿದೆ. ನಗರದ ಜೈ ಭೀಮ್ ಭವನದಲ್ಲಿ ನಡೆದ ಸಭೆಯಲ್ಲಿ ಹಿರಿಯ ಹೋರಾಟಗಾರಾದ ಬಿ. ಗೋಪಾಲ್, ಚಲನ ಚಿತ್ರ ನಟ ಅಹಿಂಸಾ ಚೇತನ್, ಸಾಮಾಜಿಕ ಹೋರಾಟಗಾರರರಾದ ಹರಿರಾಮ್ ಎ., ಆರ್ ಪಿಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಹ.ರಾ.ಮಹೇಶ್, ಹೆಣ್ಣೂರ ಶ್ರೀನಿವಾಸ್, ಕೇಶವಮೂರ್ತಿ, ಜಿಗಣಿ ಶಂಕರ್, ಶ್ರೀನಾಥ್ ಪೂಜಾರಿ, ಹೆಬ್ಬಾಳ ವೆಂಕಟೇಶ್, ರಾಜಗೋಪಾಲ್ ಸೇರಿದಂತೆ ರಾಜ್ಯದ ಪ್ರಮುಖ ನಾಯರು ಭಾಗಿಯಾಗಿದ್ದರು.


Spread the love