Spread the love

ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಬರೆದಿರುವಂತಹ ಪ್ರಪಂಚದ ಏಕೈಕ ಗ್ರಂಥ ಸಂವಿಧಾನ ಇದರ ಅಡಿಯಲ್ಲಿ ರಚಿಸಲಾದ ಸ್ಥಾಪನೆಯಾದ ” ಮಾಹಿತಿ ಹಕ್ಕು ಅಧಿನಿಯಮ ” ಇಂದು ಹಾಲು ವಿಷಯಗಳ ಧೋರಣೆಯ ಚರ್ಚೆಗೆ ಗುರಿಯಾಗಿದೆ, ಕರ್ನಾಟಕ ಮಾಹಿತಿ ಹಕ್ಕು ಆಯೋಗ ಬೆಂಗಳೂರು ಇಲ್ಲಿಗೆ ದಿನಾಂಕ 16-02-2022 ರಂದು ಕರ್ನಾಟಕ ರಾಜ್ಯದಲ್ಲಿ ಇರುವಂತಹ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಆಯೋಗದ ಅಧಿಕಾರಿಗಳ ಮುಂದೆ ಚರ್ಚಿ ನಡೆಸಿದರು, ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ರಿಂದ ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸರ್ಕಾರದ ನಿಯಮಾವಳಿಗಳ ಪ್ರಕಾರ ಕೆಲಸ ನಿರ್ವಹಿಸುವಂತೆ ಮನವರಿಕೆ ಮಾಡಿಸುವಂತಹ ಮತ್ತು ಮಾಹಿತಿ ಹಕ್ಕು ಆಯೋಗದಲ್ಲಿ ಕೆಲವು ಸಭಾಂಗಣಗಳಲ್ಲಿ ವಿಚಾರಣಾ ದಿನದಂದು ಸಾರ್ವಜನಿಕ ಪ್ರಾಧಿಕಾರಗಳು ಅಂಚೆ ಚೀಟಿಯನ್ನು ತೋರಿಸಿದ ತಕ್ಷಣ ಪ್ರಕರಣಗಳನ್ನು ಮುಕ್ತಾಯಗೊಳಿಸಿರುವುದು, ಹಲವಾರು ಪ್ರಕರಣಗಳಲ್ಲಿ ರೂಲ್ 14 ಗೆ ಸಂಬಂಧಿಸಿದಂತೆ ಅರ್ಜಿದಾರರು ಒಂದು ವಿಷಯಕ್ಕಿಂತ ಹೆಚ್ಚಿಗೆ ವಿಷಯಗಳನ್ನು ಕೇಳಿರುತ್ತಾರೆ ಎಂದು ಆದೇಶ ಮಾಡುವುದು. ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿ ವಿಚಾರಣಾ ದಿನದಂದು ಅರ್ಜಿದಾರರು ಹಾಜರಿ ಇಲ್ಲದ ಸಮಯದಲ್ಲಿ ಅರ್ಜಿದಾರರು ಹಾಜರಾಗಿರುವುದಿಲ್ಲ ಮತ್ತು ಆಕ್ಷೇಪಣೆ ಸಲ್ಲಿಸಿರುವುದಿಲ್ಲ ಆದ್ದರಿಂದ ವಿಲೇ ಮಾಡಲಾಗಿದೆ ಎಂದು ಕೆಲವು ಬೆಂಚುಗಳಲ್ಲಿಆದೇಶಿಸಿರುವುದು, ಮಾಹಿತಿ ಅಧಿಕಾರಿ ಹಾಜರು ಇಲ್ಲದಿದ್ದರೆ ಅವರ ಅದನ್ನು ಮುಂದೊಂದು ದಿನಕ್ಕೆ ಹೊತ್ತೊಯ್ಯುವ ಕೆಲಸ ಮಾಡಿದೆಯೇ ವರತು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸಾರ್ವಜನಿಕ ಪ್ರಾಧಿಕಾರಗಳಿಗೆ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಇಲಾಖಾ ಮುಖ್ಯಸ್ಥರಿಗೆ ದಂಡ ಮತ್ತು ಶಿಸ್ತು ಕ್ರಮಕ್ಕೆ ಆದೇಶ ಮಾಡಿರುವುದು ಕಡಿಮೆ .ಕೆಲವು ಪ್ರಕರಣಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ರ (ಕೇಂದ್ರ ಕಾಯ್ದೆ 22 )ರಂತೆ ಸೆಕ್ಷನ್ 4 (1)A.4(1)B.5(1).5(2).5(3).5(4).5(5).19(1)ನ್ನು ತಯಾರಿಸಿ ಗಣಕೀಕರಣಗೊಳಿಸಿ ಕ್ಯಾಟ್ ಲಾಗಿಂಗ್ ಮತ್ತು ಇಂಡೇಕ್ಸಿಂಗ್ ಮಾಡಿ ಸರ್ಕಾದ ಅಥವಾ ಇಲಾಖೆ ವೆಬ್ಸೈಟ್ಗೆ ಅಪ್ಲೋಡ್ ಮಾಡಿರುವ ದಾಖಲೆಗಳನ್ನು ಅರ್ಜಿದಾರರು ಅರ್ಜಿ ಮೂಲಕ ಕೇಳಿದರೆ ಅರ್ಜಿದಾರರಿಗೆ ಕೊಡಿಸಿರುವುದಿಲ್ಲ ಇದು ಸ್ವಯಂ ಪ್ರೇರಣೆಯಿಂದ ಮಾಡಬೇಕಾದ ಕೆಲಸ ಆದರೆ ಸಾರ್ವಜನಿಕ ಪ್ರಾಧಿಕಾರಿಗಳು ಮಾಡಿರುವುದಿಲ್ಲ ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಭ್ರಷ್ಟಾಚಾರವು ಜಾಸ್ತಿಯಾಗುತ್ತ ಬರುತ್ತಿದೆ ಎಂದು ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು 6(1) ಅರ್ಜಿಗೆ ಯಾವುದೇ ಉತ್ತರ ಮತ್ತು ಹಿಂಬರಹ ನೀಡುವುದಿಲ್ಲ, ಪ್ರಥಮ ಮೇಲ್ಮನವಿ ಸಲ್ಲಿಸಿದಾಗಲೂ ಕೂಡ ಯಾವುದೇ ಉತ್ತರ ಹಿಂಬರಹ ನೀಡಿರುವುದಿಲ್ಲಾ ಮತ್ತು ಮೇಲ್ಮನವಿ ಆಯೋಗಕ್ಕೆ ಸಲ್ಲಿಸಿದ ನಂತರ ವಿಚಾರಣೆ ಸಮಯದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆ ಈ ಸಮಸ್ಯೆಗಳು ನಿಲ್ಲಬೇಕು ಸಾರ್ವಜನಿಕ ಪ್ರಾಧಿಕಾರಗಳು ಅರ್ಜಿದಾರರು ಮೂಲ ಅರ್ಜಿ ನೀಡಿದ ತಕ್ಷಣ 30 ದಿನಗಳಲ್ಲಿ ಉತ್ತರ ನೀಡಬೇಕು ಇದ್ಯಾವ ನಿಯಮಗಳನ್ನು ಪಾಲಿಸದ ಅಧಿಕಾರಗಳು ತಮ್ಮ ಉಳಿವಿಗಾಗಿ ವಿಷಯ ಮತ್ತು ವಿಚಾರಗಳನ್ನು ಬೇರೆಡೆ ಹೊತ್ತೊಯ್ಯುವ ಕೆಲಸ ಮಾಡುತ್ತಿದ್ದು ಇದೆಲ್ಲವನ್ನು ಖಂಡಿಸಿ ಇಂದು ಪ್ರಕರಣಗಳ ವಿಚಾರಣೆಯನ್ನು ಸ್ಥಗಿತಗೊಳಿಸಿ ಸಾಮಾಜಿಕ ನ್ಯಾಯಕ್ಕಾಗಿ ಮಾಹಿತಿ ಆಯೋಗದ ಮುಂದೆ ನೆರೆದು ಮಾಹಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಮಾಜಿಕ ಕಾರ್ಯಕರ್ತರಾದ ಎಚ್ ಎಂ ವೆಂಕಟೇಶ್ ಬಿ ಎಚ್ ವೀರೇಶ್ ಎಚ್ ಜಿ ರಮೇಶ್ ಕುಣಿಗಲ್ ಗಂಗ ನರಸಿಂಹಯ್ಯ ಮಾಚೋಹಳ್ಳಿ ಮುನಿಯಪ್ಪ ವಿಜಯನಗರ ಭಾಸ್ಕರ್ ರವರು ವಿಜಯನಗರ ಸಿಪಿ ತಿಪ್ಪೇಸ್ವಾಮಿ ಚಿತ್ರದುರ್ಗ. ರಾಘವೇಂದ್ರ ರಾಜಾಜಿನಗರ ಬಂಗಾರಪ್ಪ ಶಿವಮೊಗ್ಗ ಹಾಗೂ ಇನ್ನೂ ಮುಂತಾದ ಸಾಮಾಜಿಕ ಕಾರ್ಯಕರ್ತರು ಈ ದಿನ ಹಾಜರಿದ್ದರು.


Spread the love