Spread the love

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಸರ್ಕಾರಗಳು ತಮ್ಮ
ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿರುವುದರಿಂದ ಜನಸಾಮಾನ್ಯರ
ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು . ರಾಜ್ಯದ ಸಣ್ಣ ರೈತರ ಭೂ ಸಮಸ್ಯೆ,ಬಗರ್ ಹುಕುಂ ಜಮೀನು ಮಂಜೂರಿಗೆ ಹಾಗೂ ಗ್ರಾಮ ಸಹಾಯಕರ ಖಾಯಂಮಾಡುವಂತೆ, ಎಸ್ ಸಿ/ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚು ಮಾಡುವಂತೆ ಹಾಗೂ ರಾಯಚೂರು ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಇತ್ಯಾದಿ ಸಮಸ್ಯೆಗಳು
೪೦-೫೦ ವರ್ಷಗಳಿಂದಲೂ ಪರಿಹಾರ ಕಾಣಲಿಲ್ಲವೆಂದರೆ ಆಳುವವರು ತನ್ನ ಪ್ರಜೆಗಳ ಬಗ್ಗೆ ಎಂತಹ
ದಿವ್ಯ ನಿರ್ಲಕ್ಷ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ. ಈ ಹಿನ್ನಲೆಯಲ್ಲಿ ಕೆಲವು ಜ್ವಲಂತ
ಸಮಸ್ಯೆಗಳ ಪರಿಹಾರಕ್ಕಾಗಿ ಬಹುಜನ ಸಮಾಜ ಪಾರ್ಟಿ ದಿನಾಂಕ : 17- 02- 2022 ಎಲ್ಲಾ ಜಿಲ್ಲಾ ಶಾಖೆಗಳಿಂದ ಧರಣಿ ಸತ್ಯಾಗ್ರಹದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು ಇಂದು ತುಮಕೂರು ಜಿಲ್ಲಾ BSP ಶಾಖೆಯವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಸರ್, ತುಮಕೂರು ಜಿಲ್ಲಾಧ್ಯಕ್ಷರಾದ ಜೆ, ಎನ್, ರಾಜಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ, ಸಿ, ರಂಗಧಾಮಯ್ಯ, ರುದ್ರಪ್ಪ, ಮಂಜುನಾಥ ಶಿರಾ, ತಾಲೂಕು ಅದ್ಯಕ್ಷರಾದ ಟಿ. ಹನುಮಂತರಾಯ. ವೀರಕ್ಯಾತಯ್ಯ. ಗೋಪಾಲ. ಹರೀಶ್. ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರವಣಪ್ಪ, ಸಣ್ಣ ಭೂತಣ್ಣ, ತಿಪ್ಪೇಸ್ವಾಮಿ ವದನಕಲ್ಲು, ಮರಿದಾಸನಹಳ್ಳಿ ಕೆಂಚಪ್ಪ, ಪಳವಳ್ಳಿ ಗಂಗಾಧರ, ಡಿ, ಟಿ, ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,


Spread the love