Spread the love

ಸರ್ಕಾರಗಳು ಬದಲಾಗುತ್ತಿವೆ, ಆದರೆ ರಾಜ್ಯದ ಜನತೆಯ ಸಮಸ್ಯೆಗಳು ಪರಿಹಾರ ಕಾಣದೆ
ತೊಂದರೆಪಡುತ್ತಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಸರ್ಕಾರಗಳು ತಮ್ಮ
ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿರುವುದರಿಂದ ಜನಸಾಮಾನ್ಯರ
ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ರಾಜ್ಯದ ಸಣ್ಣ ರೈತರ ಭೂ ಇತ್ಯಾದಿ ಸಮಸ್ಯೆಗಳು
೪೦-೫೦ ವರ್ಷಗಳಿಂದಲೂ ಪರಿಹಾರ ಕಾಣಲಿಲ್ಲವೆಂದರೆ ಆಳುವವರು ತನ್ನ ಪ್ರಜೆಗಳ ಬಗ್ಗೆ ಎಂತಹ
ದಿವ್ಯ ನಿರ್ಲಕ್ಷ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ. ಈ ಹಿನ್ನಲೆಯಲ್ಲಿ ಕೆಲವು ಜ್ವಲಂತ
ಸಮಸ್ಯೆಗಳ ಪರಿಹಾರಕ್ಕಾಗಿ ಬಹುಜನ ಸಮಾಜ ಪಾರ್ಟಿ ದಿನಾಂಕ : 17- 02- 2022 ಎಲ್ಲಾ ಜಿಲ್ಲಾ ಶಾಖೆಗಳಿಂದ ಧರಣಿ ಸತ್ಯಾಗ್ರಹದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು ಇಂದು ಚಿತ್ರದುರ್ಗ ಜಿಲ್ಲಾ BSP ಶಾಖೆಯವತಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದ್ದು ಈ ಸಂದರ್ಭದಲ್ಲಿ BSP ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದಂತಹ ಅಶೋಕ ಚಕ್ರವರ್ತಿ , ಡಾ.ಬಿ. ಗಿರೀಶ್ ಓಬಯ್ಯನಹಟ್ಟಿ , ರಾಜ್ಯ ಕಾರ್ಯದರ್ಶಿಯ ಎನ್. ಪ್ರಕಾಶ್ , ಜಿಲ್ಲಾ ಸಂಯೋಜಕ ಕೆ. ಎನ್ ದೊಡ್ಡೆಟಪ್ಪ , ಜಿಲ್ಲಾಧ್ಯಕ್ಷ ವೆಂಕಟೇಶ್ ಐಹೊಳೆ , ಜಿಲ್ಲಾ ಉಪಾಧ್ಯಕ್ಷ ಕೆ. ತಿಮ್ಮಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಟಿ. ಶಿವಕುಮಾರ್ , ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಟಿ . ರುದ್ರಮುನಿ , ಹಿರಿಯೂರು ತಾಲ್ಲೂಕು ಅಧ್ಯಕ್ಷರ ಜಗದೀಶ್ , ಚಿತ್ರದುರ್ಗ ತಾಲೂಕು ಅಧ್ಯಕ್ಷ ಕೆ. ಶಿವಕುಮಾರ್ , ಹಾಗೂ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಹೆಚ್. ಆರ್. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು


Spread the love