ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ವ್ಯಾಪ್ತಿಯ ಲಿಂಗದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ನಿರ್ಲಕ್ಷದಿಂದ ಆಸ್ಪತ್ರೆಯಲ್ಲಿಯೆ ಸುಮಾರು ಒಂದುವರೆ ತಾಸು ಮಾತು ಬಾರದ ಮೂಕ ಆಸುಪಾಸು 80 ವಯಸ್ಸುಳ್ಳ ವಯೋವೃದ್ಧೆ ಒಬ್ಬಳು ಆಡಳಿತ ವೈದ್ಯಾಧಿಕಾರಿಗಳ ಕಚೇರಿಯ ಬಾಗಿಲ ಮುಂದೆಯೇ ಚಿಕಿತ್ಸೆಗಾಗಿ ನರಳಾಡುತ್ತಿರುವಂತಹ ಮನಕಲಕುವ ದೃಶ್ಯ ಒಂದು ಕಂಡುಬಂದಿದ್ದು ತುಂಬಾ ಅಸಾಯಕ ಪರಿಸ್ಥಿತಿಯಲ್ಲಿದ್ದ ವೃದ್ಧೆಯ ಚಿಕಿತ್ಸೆ ಹಂಬಲವನ್ನು ಆಡಳಿತ ವೈದ್ಯಾಧಿಕಾರಿ ಕಂಡರೂ ನಿರ್ಲಕ್ಷ ವಹಿಸಿದ್ದನ್ನು ಗಮನಿಸಿದ ಸ್ಥಳೀಯರು ಈ ದುರ್ಘಟನೆಯನ್ನು ಸಹಿಸಲಾರದೆ ತಮ್ಮ ಮೊಬೈಲ್ ಫೋನ್ ಗಳ ಮೂಲಕ ದೃಶ್ಯವನ್ನು ಸರೆಹಿಡಿಯಲು ಮುಂದಾದಾಗ ಅದನ್ನು ಕಂಡು ದಾದಿ (nurse) ಒಬ್ಬರು ವೃದ್ಧೆಯ ಆರೈಕೆಗೆ ಮುಂದಾಗಿದ್ದು ಸ್ಥಳೀಯರ ಬುದ್ಧಿವಂತಿಕೆಯಿಂದ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ ಎಚ್ಚರಿಸುವಂತೆ ಮಾಡಿದೆ.