Spread the love

ನನ್ನದೊಂದು ಪುಟ್ಟ ಮಾತು ನಿಮಗೆ …..,
ಇಲ್ಲಿ ನಾನು ಯಾರಿಗೆ ಶುಭ ಹಾರೈಸಬೇಕು ಗೊತ್ತಾಗುತ್ತಿಲ್ಲ , ಹೆಸರಿಗೆ ಮಾತ್ರ ಮಹಿಳಾ ದಿನಾಚರ ಅಂತ ಹೇಳ್ತಾ ಇದ್ದೇವೆ ನಿಜಕ್ಕೂ ಅವಳ ಮೇಲೆ ನಡೆಯುತ್ತಿರುವ ಶೋಷಣೆ ಅವಮಾನಗಳು ಅತ್ಯಾಚಾರಗಳು ಯಾವುವು ನಿಂತಿಲ್ಲ , ಕೊನೆಯಾಗಿಲ್ಲ. ಎಲ್ಲೋ ಲಕ್ಷಕ್ಕೆ ಒಬ್ಬರೋ ಇಬ್ಬರೋ ರಾಜಕೀಯ ಅಧಿಕಾರ ಹಿಡಿದು ಕೊಂಡರೆ ಸಾಲದು ಇವರೇ ಈ ದೇಶ ಅಳುವಂತ ಶಕ್ತಿ ಅವರಿಗೆ ನೀಡಬೇಕು , ಹೆಂಡತಿ ಅಧ್ಯಕ್ಷೆ ಅದ್ರೆ ಅವಳ ಹೆಸರಿನಲ್ಲಿ ಗಂಡ ದರ್ಬಾರು ನಡೆಸುವುದಲ್ಲ , ಝಾನ್ಸಿ ರಾಣಿ ಅಂತೆಯೋ , ತಾಯಿ ಮಲ್ಲಮ್ಮ , ಚನ್ನಮ್ಮ ರಂತೆ ನಾವು ರಾಜಕೀಯ ಅಧಿಕಾರ ಅವರಿಗೆ ಕೊಡಬೇಕಿದೆ. ಸಾವಿರಕ್ಕೊಂದು ಯಶಸ್ವಿ ಉದ್ಯಮಶೀಲ – ಕ್ರೀಡಾಪಟು ಹೆಣ್ಣು ಮಕ್ಕಳನ್ನು ಇಂದಿಗೂ ನಾವು ಒಂದು ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಇಟ್ಟಿದ್ದೇವೆ . ಅವಳಿಗೂ ಜಾತಿ ಧರ್ಮದ ದಾರ ಕಟ್ಟಿ ಸಂಸ್ಕೃತಿ ಆಚಾರ-ವಿಚಾರ ಅನ್ನೋ ಕಟ್ಟುಪಾಡುಗಳ ನಡುವೆ ಅವಳನ್ನು ಬಂಧನದಲ್ಲಿ ಇಟ್ಟಿದೆ ಈ ಸಮಾಜ, ಇರ್ಲಿ ಈ ಎಲ್ಲ ನಿದರ್ಶನಗಳ ಮುಂದೆ ಒಂದಿಬ್ಬರು ಇವುಗಳಿಂದ ಹೊರಬಂದು ಎಲ್ಲವನ್ನೂ ಮೆಟ್ಟಿ ನಿಂತು ಹೆಣ್ಣು ಯಾರಿಗೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ ಆದರೆ ಅದನ್ನು ಉದಾಹರಣೆಯನ್ನಾಗಿ ಅಷ್ಟೇ ಇಟ್ಟು ಕೊಂಡ ನಾವು ಅವರಂತೆ ನಮ್ಮ ಮಕ್ಕಳನ್ನು ಬೆಳೆಸುತಿಲ್ಲ ಇಂದಿಗೂ ನಮ್ಮ ಮುಂದೆ ಸಾಕ್ಷಿಯಾದ ಬಾಲ್ಯ ವಿವಾಹ , ಹೆಣ್ಣನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಿರುವುದು , ಹಲವು ಸೌಲಭ್ಯ ಮತ್ತು ಮೂಲ ಸೌಕರ್ಯಗಳಿಂದ ಹಿಂದಿಕ್ಕಿರುವುದನ್ನು ನಾವು ನೋಡ ಬಹುದು ಇಲ್ಲಿ ನಾವು ಅವಳಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದೇವೆ…? ಸರಿ ಇಷ್ಟೇ ಆಗಿದ್ದರೆ ಹೆಣ್ಣಿನ ಹಕ್ಕುಗಳ ಹೋರಾಟ ಯಾಕೆ ನಡೆಯ ಬೇಕಿತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆ ಆದರೂ ಏನಿತ್ತು , ಸಾವಿತ್ರಿ ಪೂಲೆ ಅವರು ಕೆಸರು ಮೈಗೆರಸಿ ಕೊಂಡು ಶಿಕ್ಷಣದ ಮಹತ್ವ ಏಕೆ ಸಾರ ಬೇಕಿತ್ತು , ತನ್ನ ಸ್ತನಗಳನ್ನು ಕುಯ್ದು ಸಮವಸ್ತ್ರ ಧರಿಸುವ ಹಕ್ಕನ್ನು ಏಕೆ ಕೇಳಬೇಕಿತ್ತು ಪಾಪ ಇದ್ಯಾವುದೂ ನಡೆದೇ ಇಲ್ಲ ಅನ್ನುವ ಅದೆಷ್ಟೋ ನನ್ನ ತಾಯಂದಿರು , ಅಕ್ಕ – ತಂಗಿಯರು, ಇನ್ನೂ ದೇವಸ್ಥಾನಗಳ ಮುಂದೆ ಮಂಡಯೂರಿ ಕೂತಿದ್ದಾರೆ ಅಯ್ಯೋ ಅವರಿಗೆ ಗೊತಿಲ್ಲವೇನೋ ಶಾರದಯನ್ನೆ ಅತ್ಯಾಚಾರಗೈದ ಬ್ರಹ್ಮನ ಸಂಕುಲ ಇನ್ನೂ ಜೀವಂತವಾಗಿದೆ ಎಂದು , ಅವರಿಗೆ ತಿಳಿದಿಲ್ಲ ವೆನೋ ಹೆಣ್ಣನ್ನೇ ದೇವರಾಗಿ ಪೂಜಿಸಿದ ಅದೇ ಕೈಗಳು ದೆವ್ವಗಳಂತೆ ನಡುಬೀದಿಯಲ್ಲಿ ಅವಳನ್ನು ಅರಬೆತ್ತಲೆ ಯಾಗಿ ನಿಲ್ಲಿಸಿ ಇವರ ಕಾಮ ದಾಹವನ್ನು ತೀರಿಸಿಕೊಂಡಿದ್ದು ಅವಳಿಗೆ ಅರಿವಿಲ್ಲವೇನೋ . ಹೀಗೆ ಎಷ್ಟೇ ಹೇಳಿದರು – ಬರೆದರು ಯಾವುದು ನಿಲ್ಲುವುದಿಲ್ಲ ಎಂದು ನನಗೆ ಗೊತ್ತು ಆದರೆ ಈ ಎಲ್ಲ ಏಳುಬೀಳಿನ ನಡುವೆ ನಮ್ಮ ತನದ ಉಳಿವಿಗಾಗಿ ಹೋರಾಡುತ್ತಿರುವ ಅ ಒಂದು ಹೆಣ್ಣು ಸಂಕುಲಕ್ಕೆ ನನ್ನದೊಂದು ಕೋಟಿ ನಮನಗಳು ಹೇಳಬಯಸುತ್ತೇನೆ . ನನ್ನ ಜೀವನದಲ್ಲೂ ಕೂಡ ಅನೇಕ ಪಾತ್ರಗನ್ನು ತೊಟ್ಟ ಹೆಣ್ಣಿಗೆ ನಾನು ಜೀವ ಮಾನದುದ್ದಕ್ಕು ಋಣಿ ಆಗಿ ಇರ್ತೇನೆ,
ಇರಲಿ ಹೀಗೊಂದು ನನ್ ಕಡೆಯಿಂದ ಮತ್ತೊಮ್ಮೆ ಮೋಗದೊಮ್ಮೆ ವಿಶ್ವದ ಎಲ್ಲ ಹೆಣ್ಣು ಸಂಕುಲಕ್ಕೆ “ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು”
~ ✍️ ಅಜಿತ್ ಕುಮಾರ್.ಬಿ.ಓಬಯ್ಯ ( ಅಗ್ನಿ ಅಜಿತ್ )


Spread the love