Spread the love

ಕರ್ನಾಟಕದ ಹೆಸರಾಂತ ಸಿನಿ ಕಲಾವಿದರಾದ , ಹಾಗೂ ಅಭಿಮಾನಿಗಳನ್ನು ದೇವರಂತೆ ಕಂಡ , ಹಲವು ಸೇವೆಗಳಿಂದ ಬಡವರಿಗೆ ದೇವರಾದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವಾನ್ವಿತ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡುವುದನ್ನು ಘೋಷಿಸಿದ್ದು ಈಗಾಗಲೇ ಇದು ಸಮಾಜಿಕ ಜಾಲತಾಣದಲ್ಲಿ ವಿಪರೀತ ಪ್ರಶಂಸೆಗೆ, ಮೆಚ್ಚುಗೆಗೆ ಗುರಿಯಾಗಿದೆ ಈ ಹಿಂದೆ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರವು “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಕೊಟ್ಟಿದ್ದು , ಇದೀಗ ಅವರ ಪ್ರತಿ ಹುಟ್ಟುಹಬ್ಬವನ್ನು ಕರ್ನಾಟಕ ಚಲನಚಿತ್ರ ಜಯಂತಿ ಎಂದು ಆಚರಿಸುವುದಾಗಿ ಚಿತ್ರ ಮಂಡಳಿಯಿಂದ ಸುದ್ದಿ ಕೂಡ ಹರಡುತ್ತಿದ್ದು ನಿಜವಾಗಿಯೂ ಇವರ ಸೇವೆ ವ್ಯಕ್ತಿತ್ವ ಮತ್ತು ಮಾನವೀಯತೆಗೆ ಸಲ್ಲ ಬೇಕಾದಂತಹ ಗೌರವಗಳೆ ಇದಾಗಿದ್ದು , ಅಪ್ಪು ಕೇವಲ ನಟರಾಗಿದ್ದಲ್ಲದೆ ಅದೆಷ್ಟೋ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಪರಮಾತ್ಮನಂತೆ ರಾರಾಜಿಸುತ್ತಿದ್ದಾರೆ . ತಮ್ಮ ಸಹಾಯಹಸ್ತದಿಂದ ಅದೆಷ್ಟು ಬದುಕುಗಳು ಕಟ್ಟಿಕೊಂಡಂತ ಹಲವರು ಅಪ್ಪು ಅವರನ್ನು ಇಂದಿಗೂ ದೇವರಾಗಿ ಪೂಜಿಸುತ್ತಿದ್ದಾರೆ ಇಳಿ ವಯಸ್ಸಿನಲ್ಲಿ ನಿಧನರಾದ ಅಪ್ಪು ಮಾನವೀಯತೆಯ ಮಾಣಿಕ್ಯರಾಗಿದ್ದು, ಅವರ ವ್ಯಕ್ತಿತ್ವ, ನಟನೆ, ಸೇವೆ, ಮತ್ತು ಬದುಕು ಇಂದಿಗೂ ಹತ್ತಾರು ಯುವಕರಿಗೆ ಸ್ಪೂರ್ತಿದಾಯಕ ಮಾರ್ಗದರ್ಶನವಾಗಿದೆ. ಅಪ್ಪು ಮನುಷ್ಯನ ಜನ್ಮವನ್ನು ಮೀರಿ ದೇವರಂತಹ ಕೆಲಸಕಾರ್ಯಗಳನ್ನು ಈ ಮಣ್ಣಲ್ಲಿ ಮಾಡಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ತಾನಾಗಿ ಹರಿದುಬರುತ್ತಿರುವ ಪ್ರಶಸ್ತಿಪ್ರದಾನಗಳು ನಿಜಕ್ಕೂ ತಮ್ಮ ಗೌರವಗಳನ್ನು ಹೆಚ್ಚಿಸಿ ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಈ ವಿಷಯವಾಗಿ ಅಪ್ಪು ಅಭಿಮಾನಿಗಳು ಅಲ್ಲದೆ ಬಹುಪಾಲು ಕರ್ನಾಟಕದ ಎಲ್ಲರೂ ಮೈಸೂರು ವಿವಿಯ ಈ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
~ ✍️ ಅಗ್ನಿ ಅಜಿತ್


Spread the love