Spread the love

ಬೆಂಗಳೂರಿನ ನಗರದ ಕೋರಮಂಗಲ 8 ಬ್ಲಾಕ್ ನಲ್ಲಿನ ಕಾರ್ಪೋರೇಷನ್ ಬ್ಯಾಂಕ್ ಹತ್ತಿರದ ಚಾಮುಂಡೇಶ್ವರಿ ಉದ್ಯಾನವನದಲ್ಲಿರುವ ಗ್ರಂಥಾಲಯದಲ್ಲಿ ಗ್ರಂಥಪಾಲಕರು ಹಲವುದಿನಗಳಿಂದ ಬಾಬಾ ಸಾಹೇಬ್ ಡಾ|| ಬಿ. ಅರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಚೇರಿಯಲ್ಲಿ ಹಾಕದೆ ಅದನ್ನು ಮೂಲೆಗುಂಪು ಮಾಡಿದ್ದರು ಮತ್ತು ಭಾರತದ ಸಂವಿಧಾನ ಪುಸ್ತಕವನ್ನು ಕೂಡ ಗ್ರಂಥಾಲಯದಲ್ಲಿ ಇಟ್ಟಿರಲಿಲ್ಲ.

ದಲಿತ ಹೋರಾಟಗಾರ್ತಿ ‘ ಸ್ಫೂರ್ತಿ ಕೀರ್ತಿ ‘

ಈ ವಿಚಾರವನ್ನು ತಿಳಿದ ಸ್ಥಳೀಯ ಹೋರಾಟಗಾರ್ತಿಯಾದ ಶ್ರೀಮತಿ ಸ್ಪೂರ್ತಿ ಕೀರ್ತಿ ಅವರು ಅದನ್ನು ಪ್ರಶ್ನಿಸಿದ್ದಕ್ಕೆ ಗ್ರಂಥಪಾಲಕರು ” ಈಗ ಅದಕ್ಕೆ ಏನು ಹಾಕಿಲ್ಲ ಅಂದ್ರೆ ಏನ್ ಮಾಡ್ಕೊತಿರ ಹೋಗಿ” ಎಂದು ಬೇಜವಾಬ್ದಾರಿತನದ ಮಾತುಗಳನ್ನಾಡಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಸ್ಪೂರ್ತಿ ರವರು ” ಸರಿ ಆಯ್ತು ಬಿಡಿ ನಾವು ಕಾನೂನಿನ ಪ್ರಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ” ಎಂದು ಹೇಳಿ ಅಲ್ಲಿಂದ ಹೊರ ನಡೆದಿದ್ದಾರೆ ಅಷ್ಟೇ . ಮಾರನೇ ದಿನ ಅವರು ತಮ್ಮ ಸಂಗಡಿಗರೊಡನೆ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಅಚ್ಚರಿಯ ಬದಲಾವಣೆಯಾಗಿತ್ತು . ಕಾನೂನಾತ್ಮಕವಾಗಿ ಹೋರಾಟ ಇಂದ ತಕ್ಷಣ ಎದುರಿದ ಗ್ರಂಥಪಾಲಕರು ಕಚೇರಿಯಲ್ಲಿ ಫೋಟೋ ಮತ್ತು ಪುಸ್ತಕವನ್ನು ತಾವೇ ಕಚೇರಿಯಲ್ಲಿ ಇರಿಸಿದ್ದಾರೆ . ಒಟ್ಟಾರೆ ಸ್ಥಳೀಯರ ಕಾನೂನಿನ ಅರಿವಿನಿಂದ ಜಾತಿ ಪೀಡಿತ ಅಧಿಕಾರಿಯೊಬ್ಬರು ಸಮಾನತೆಯ ಪಾಠ ಕಲಿತಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
~✍️ ಅಗ್ನಿ ಅಜಿತ್


Spread the love