Spread the love

ಛಲವಾದಿ ಯುವ ಸಮೂಹವನ್ನು ಸಂಘಟಿತ ಗೊಳಿಸಲು ನೂತನವಾಗಿ ಛಲವಾದಿ ಯುವ ಬ್ರಿಗೇಡ್ ಅಸ್ತಿತ್ವಕ್ಕೆ ತರಲಾಗಿದೆ ಸಮುದಾಯದ ಯುವಜನರಲ್ಲಿ ಸ್ವಾವಲಂಬನೆಯ ಹೋರಾಟ ಕಟ್ಟುವ ಶಕ್ತಿ ಯನ್ನು ಉದ್ದೇಶಿಸಲಾಗಿದೆ ಎಂದು ಛಲುವಾದಿ ಯುವ ಬ್ರಿಗೇಡ್ ಅಧ್ಯಕ್ಷ ಸೂರಿ ಛೆಲುವಾದಿ ಹೇಳಿದರು.
ಅವರು ರಾಯಚೂರಿನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದು ಯುವಶಕ್ತಿಯನ್ನು ಸಂಘಟಿಗೊಳಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಸಂಘಟನೆನ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು . ಅಧ್ಯಕ್ಷರಾಗಿ ಕೆ. ಇ. ಕುಮಾರ್ ಉಪಾಧ್ಯಕ್ಷರಾಗಿ ಮಲ್ಲೇಶ್ ಕುಲಿಮಿ, ಪ್ರಾಣೇಶ್ ಪ್ರಧಾನ ಕಾರ್ಯದರ್ಶಿ ಎಂ.ಮಾರೆಪ್ಪ ಇವರನ್ನು ನೇಮಿಸಲಾಗಿತ್ತು. ಮುಂದೆ ಸಮಾಜದ ಯುವಕರ ಅಭಿಪ್ರಾಯ ಪಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಣೇಶ್, ಕೆ. ಇ. ಕುಮಾರ್, ಆತ್ಮಾನಂದ, ಎಂ.ಮಾರಪ್ಪ ಸೇರಿದಂತೆ ಹಲವು ಸಮುದಾಯದ ಮುಖಂಡರು ಹಾಜರಿದ್ದರು.


Spread the love