Spread the love

ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಸಂಚಲನ ಉಂಟುಮಾಡಿದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಪ್ರಕಟಣೆಯ ನಂತರ ಬಾರಿ ಮೊತ್ತದ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಉತ್ತರಪ್ರದೇಶ, ಉತ್ತರಖಂಡ್, ಮಣಿಪುರ್, ಗೋವಾ , ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿದ್ದು . ಪಂಜಾಬ್ ನಲ್ಲಿ ಮಾತ್ರ ಪೊರಕೆ ತನ್ನ ಸ್ವಚ್ಚತಾ ಕಾರ್ಯವನ್ನು ಪ್ರಾರಂಭ ಮಾಡಿಕೊಂಡಿದೆ. ನಾಲ್ಕು ಕಡೆ ಬಿಜೆಪಿ ಸರ್ಕಾರ ಜಾರಿಯಗಳಿದ್ದು , ಪಂಜಾಬ್ ನಲ್ಲಿ APP ಸ್ವಾತಂತ್ರವಾಗಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಈ ಫಲಿತಾಂಶವು ಕೇವಲ ಪಂಚರಾಜ್ಯಗಳಲ್ಲಿ ಅಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಭವಿಷ್ಯದ ಅನೇಕ ರಾಜಕೀಯ ಏರುಪೇರುಗಳಿಗೆ ಕಾರಣವಾಗಿದೆ .

ಮತ್ತೊಂದೆಡೆ ವಿಪರೀತ ಚರ್ಚೆಗೆ ಗುರಿಯಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಾರ್ಟಿ ಬಾರಿ ಹಿನ್ನೆಡೆ ಕಂಡಿದ್ದು ಇತ್ತ ಕಾಂಗ್ರೆಸ್ ಕೇಂದ್ರದ ಮತ್ತು ರಾಜ್ಯಗಳ ಮಟ್ಟದಲ್ಲಿ ಹೊಸರೀತಿಯ ಕಾರ್ಯಚರಣೆ ಹಾಗೂ ಪದವಿ ತ್ಯಾಗಗಳಿಗೆ ಮುಂದಾಗಿದೆ. ಬಿಎಸ್ಪಿ ಕೂಡ ತನ್ನ ಠೇವಣಿಯನ್ನು ಕಳೆದುಕೊಂಡಿದ್ದು ರಾಜಕೀಯ ಕ್ಷೇತ್ರದಲ್ಲಿ ಭಾರಿ ದೂಷಣೆಗೆ , ಚರ್ಚೆಗೆ ಮತ್ತೆ ರಾಜಕೀಯ ಅಗ್ನಿಪರೀಕ್ಷೆಗೆ ತುತ್ತಾಗಿದೆ.ಈ ಎಲ್ಲಾ ನಡೆಗಳನ್ನು ಗಮನಿಸುವ ಹಿನ್ನೆಲೆಯಲ್ಲಿ ಈ ಫಲಿತಾಂಶಕ್ಕೆ ಮೂಲಕಾರಣ EVM ನಲ್ಲಿ ನಡೆದ ಗೋಲ್ಮಾಲ್ ಎಂದು , ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಸ್ಥಳೀಯ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ನೈಜತೆಯನ್ನು ತಿರುವಿ ಕುತಂತ್ರದ ರೀತಿಯಲ್ಲಿ ಅಧಿಕಾರ ಪಡೆದಿದೆ ಎಂದು ಅಂತರ್ಜಾಲಗಳಾದ ಫೇಸ್ಬುಕ್ ಸೇರಿದಂತೆ ಇನ್ನಿತರೆ ಸಮಾಜಿಕ ಜಾಲತಾಣಗಳಲ್ಲಿ , ವಿಡಿಯೋದ ಜೊತೆಗೆ ಅನೇಕ ಟೀಕೆ ಬರಹಗಳಲ್ಲಿ ತುಂಬಿ ಹರಡಿಕೊಳ್ಳುತ್ತಿದೆ. ಈ ವಿಷಯವಾಗಿ ಅನೇಕ ರಾಜಕೀಯ ಪ್ರಮುಖರು EVM ನನ್ನು ದೂರಿದ್ದು ಕರ್ನಾಟಕ ಬಿ ಎಸ್ ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿಯವರು ಕೂಡ ತಮ್ಮ ಫೇಸ್ಬುಕ್ ನಲ್ಲಿ ಈ ಬಗ್ಗೆ ಉತ್ತರ ಪ್ರದೇಶದಲ್ಲಿ ಈವಿಎಂ ದುರುಪಯೋಗಪಡಿಸಿಕೊಂಡು ಬಿಜೆಪಿ ಗೆದ್ದಿದೆ ಎನ್ನುವುದಕ್ಕೆ ಇಂಥ ನೂರಾರು ಸಾಕ್ಷಿಗಳಿವೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಚುನಾವಣಾ ಆಯೋಗ ಎಲ್ಲರೂ ಒಂದಾಗಿ ಎಲ್ಲ ಕ್ರಮಗಳನ್ನು ಮುಚ್ಚುಹಾಕುತ್ತಿದ್ದಾರೆ ಎಂದು ಬರೆದುಕೊಂಡು ಒಂದು ವಿಡಿಯೋ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

~ ✍️ ಅಗ್ನಿ ಅಜಿತ್.


Spread the love