ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ ಮೂರು ಕಡೆ ಸೇರಿದಂತೆ ಒಟ್ಟು ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ ನಡೆಸಿದೆ , 18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ದಾಳಿ ಇದಾಗಿದ್ದು.
ಏಕಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಆಸ್ತಿಪಾಸ್ತಿಗಳ ಜಾಗದ ಮೇಲೆ ದಾಳಿ ಮಾಡಿ ಕಡತಗಳ ಪರಿಶೀಲನೆಗೆ ಮುಂದಾಗಿದೆ.
ಬೆಂಗಳೂರಿನ 3 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 14 ಕಡೆ ಎಸಿಬಿ ದಾಳಿ ಮಾಡಿದೆ ಕೈಗಾರಿಕೆ & ವಾಣಿಹಜ್ಯ ಇಲಾಖೆಯ ಖನಿಜ ಭವನದ ಹೆಚ್ಚುವರಿ ನಿರ್ದೇಶಕರಾಗಿರುವ ಬಿ.ಕೆ. ಶಿವಕುಮಾರ್, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಜೆ ಜ್ಞಾನೇಂದ್ರ ಕುಮಾರ್ ಮತ್ತು ಬಿಡಿಎ ನಗರ ಯೋಜನೆ ಉಪ ನಿರ್ದೇಶಕರಾದ ವಿ ರಾಕೇಶ್ ಕುಮಾರ್ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ.
ಜ್ಞಾನೇಂದ್ರ ಕುಮಾರ್ ಅವರ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ರಾಕೇಶ್ ಕುಮಾರ್ ಅವರು ನಾಗರಬಾವಿ ನಿವಾಸದ ಮೇಲೂ ದಾಳಿಯಾಗಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಸಾ ಮಳಜಿ ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ. ಬುಧವಾರ ಬೆಳಗ್ಗೆಯೇ ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ಇದಾಗಿದ್ದು. ವಿಜಯಪುರದಲ್ಲಿನ ಮೂರು ಹಾಗೂ ಬಾಗಲಕೋಟೆಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ವಿಜಯಪುರ ಆದರ್ಶನಗರದಲ್ಲಿನ ಪಾಟೀಲ ಪ್ಲಾನೆಯಹಿಂಭಾಗದ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಡಿವೈಎಸ್ ಪಿ ಮಂಜುನಾಥ ಗಂಗಲ್ಲ, ಇನ್ ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿ ಸೇರಿದಂತೆ ಮತ್ತಿತರೆ ಅಧಿಕಾರಿಗಳು ತನಿಖೆಯ ಕಾರ್ಯದಲ್ಲಿದ್ದರೆ.
ಒಟ್ಟಾರೆ ದಾಳಿಯಾಗಿರುವ 18 ಅಧಿಕಾರಿಗಳ ವಿವರಗಳು ಈ ಕೆಳಗಿನಂತಿವೆ
- ಜ್ಞಾನೇಂದ್ರ ಕುಮಾರ್- ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು
- ರಾಕೇಶ್ ಕುಮಾರ್- ಬಿಡಿಎ, ಪಟ್ಟಣ ಯೋಜನೆ
- ರಮೇಶ ಕಣಕಟ್ಟೆ- ಆರ್.ಎಫ್.ಓ., ಸಾಮಾಜಿಕ ಅರಣ್ಯ, ಯಾದಗಿರಿ
- ಬಸವರಾಜ ಶೇಖರ ರೆಡ್ಡಿ ಪಾಟೀಲ್- ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ
- ಬಸವ ಕುಮಾರ್ ಎಸ್ ಅಣ್ಣಿಗೇರಿ – ಶಿರಸ್ತೇದಾರ್, ಡಿಸಿ ಕಛೇರಿ, ಗದಗ
- ಗೋಪಿನಾಥ್ ಸಾ ಎನ್ ಮಾಳಗಿ- ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
- ಬಿ ಕೆ ಶಿವಕುಮಾರ್- ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು
- ಶಿವಾನಂದ್ ಪಿ ಶರಣಪ್ಪ ಖೇಡಗಿ- ಆರ್ಎಫ್ಒ, ಬಾದಾಮಿ
- ಮಂಜುನಾಥ್- ಸಹಾಯಕ ಆಯುಕ್ತ, ರಾಮನಗರ
- ಶ್ರೀನಿವಾಸ್- ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
- ಮಹೇಶ್ವರಪ್ಪ- ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
- ಕೃಷ್ಣನ್- ಎಇ, ಎಪಿಎಂಸಿ, ಹಾವೇರಿ
- ಚಲುವರಾಜ್- ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
- ಗಿರೀಶ್- ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ
- ಬಾಲಕೃಷ್ಣ ಹೆಚ್ ಎನ್- ಪೊಲೀಸ್ ಇನ್ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
- ಗವಿರಂಗಪ್ಪ- ಎಇಇ, ಪಿಡಬ್ಲ್ಯೂಡಿ, ಚಿಕ್ಕಮಗಳೂರು
- ಅಶೋಕ್ ರೆಡ್ಡಿ ಪಾಟೀಲ್- ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ, ರಾಯಚೂರು
- ದಯಾ ಸುಂದರ್ ರಾಜು- ಎಇಇ, ಕೆಪಿಟಿಚಿಎಲ್, ದಕ್ಷಿಣ ಕನ್ನಡ