Spread the love

ಇಂದು ಮುದ್ದೇಬಿಹಾಳ ತಾಲೂಕಿನ ದಲಿತ ವಿದ್ಯಾರ್ಥಿ ಪರಿಷತ್ ( DVP) ವತಿಯಿಂದ ನಗರದ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ DVP ನಾಯಕ ಆನಂದ್ ಮುದೂರ ಇಂದು ಮಹಿಳೆಯರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ . ಅದಕ್ಕಾಗಿ ಮಹಿಳಾ ವಿದ್ಯಾರ್ಥಿಗಳು ಜಾಗೃತರಾಗಬೇಕು ಮತ್ತು ಅಂಬೇಡ್ಕರ್ ಮಹಿಳೆಯರ ದೃಷ್ಟಿಕೋನ ಹೇಗಿತ್ತು ಎಂಬುದನ್ನು ನೀವು ಅರಿತುಕೊಳ್ಳಬೇಕು ಆಗಲೇ ನೀವು ನಿಮ್ಮ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ಮೆಟ್ಟಿ ನಿಲ್ಲಬಹುದು , ನಿಮ್ಮ ಹಕ್ಕುಗಳನ್ನು ಪಡೆಯಬಹುದು , ಸ್ವಾಭಿಮಾನಿಯಾಗಿ ತಲೆ ಎತ್ತಿ ಬದುಕ ಬಹುದು ಒಂದು ವೇಳೆ ನೀವು ಅಂಬೇಡ್ಕರ್ ರವರ ಸಂವಿಧಾನದ ಅರಿವು ಪಡೆದುಕೊಳ್ಳದಿದ್ದರೆ ನಿಮ್ಮ ಬದುಕು ಎಂದು ಹಸನಾಗದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ರೇಖಾ ಪಾಟೀಲ್ ರವರು ಮಹಿಳೆಯರ ಶಿಕ್ಷಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಪಾತ್ರ ಎನ್ನುವ ವಿಚಾರವಾಗಿ ಮಾತನಾಡಿದರು. ಇದೇ ವೇಳೆ ಶಿಕ್ಷಕಿ ಸರೋಜಿನಿ ವಸ್ತ್ರದ ಶಿಕ್ಷಣ ಎಂಬುದು ಮಹಿಳೆಯರಿಗೆ ಒಂದು ಅತ್ಯುತ್ತಮ ಮತ್ತು ಅಮೂಲ್ಯ ವಾದಂತಹ ಬೆಳವಣಿಗೆಯ ದಾರಿಯಾಗಿದ್ದು ಮಹಿಳೆಯರು ಇದರಿಂದ ಎಂದು ಹಿಂದುಳಿಯ ಬಾರದು ಎಂದು ಅನೇಕ ಮಹಿಳಾ ಚಿಂತನೆಯ ಬಗ್ಗೆ ಪ್ರಸ್ತಾಪ ವ್ಯಕ್ತಪಡಿಸಿದರು . ಇನ್ನು ಈ ಸಂದರ್ಭದಲ್ಲಿ ಕಲಾವಿದರಾದ ಚಂದ್ರಶೇಖರ್ ಹೊಸಮನಿ ಸಾವಿತ್ರಿ ಬಾಯಿ ಫುಲೆ ಭಾವಚಿತ್ರ ಕೈ ಕುಂಚದಿಂದ ಬಿಡಿಸಿದರು, ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷರು ಮುತ್ತು ಚಲವಾದಿ, ನೀಲಕಂಠ, ದೇವೆಂದ್ರ ತಳವಾರ,ಬಸು,ಸೋಮು, ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.


Spread the love