Spread the love

ಇಂದು ಬೆಂಗಳೂರು ನಗರ ಅಭಿವೃದ್ಧಿ ಹೊಂದುತ್ತಿರುವ ಜೊತೆಗೆ ಇಲ್ಲಿನ ನಿವೇಶನಗಳು ಮತ್ತು ಸರ್ಕಾರಿ ಜಾಗಗಳು ಅಕ್ರಮವಾಗಿ ಹಣವಂತರ ಪಾಲಾಗಿ ಅವರ ಕಪಿಮುಷ್ಠಿ ಸೇರುತ್ತವೆ , ಈಗಾಗಲೇ ಇಂತಹ ಅನೇಕ ಉದಾಹರಣೆಗಳು ಬೆಳಕಿಗೆ ಬಂದು ಅನೇಕ ಬಲವಾದ ಕಾನೂನುಗಳು ಈ ವಿರುದ್ಧ ಜಾರಿಯಾಗುವೆ. ಆದರೆ ಇದನ್ನು ಲೆಕ್ಕಿಸದೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಸಂಖ್ಯೆ 31394/2009 ( LB-BMP-PIL ) ಈ ಆದೇಶದ ವಿರುದ್ಧವಾಗಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ WARD  NO  98 ರಲ್ಲಿ ಅನಧಿಕೃತವಾಗಿ ಅಕ್ರಮವಾಗಿ ಕಾನೂನುಬಾಹಿರವಾಗಿ  ರಾಜಕಾಲುವೆ ಮೇಲೆ ಕಟ್ಟಡವನ್ನು/ಶೆಡನ್ನು ಉದ್ಯಮಿ ಯೊಬ್ಬರು ಸ್ವ – ವ್ಯವಹಾರಕ್ಕಾಗಿ ನಿರ್ಮಿಸಿಕೊಂಡಿದ್ದಾರೆ.     ಈ ವಿಚಾರ ಬಿಬಿಎಂಪಿ ಯ WORK INSPECTOR (ಕೆಲಸ ಪರಿವೇಕ್ಷಕರು) ,AE. JE. AEE. EE. SE. CE. JC . ಇವರ ಗಮನಕ್ಕೆ ಬಾರದೆ ಈ ಬಹುದೊಡ್ಡ ಕಟ್ಟಡ ನಿರ್ಮಾಣ ಸಾಧ್ಯ ಇದೆ ಎಂಬುದು ಈಗಿನ ಸಾರ್ವಜನಿಕರ ಪ್ರಶ್ನೆಯಾಗಿದ್ದು. ಕೆಲವೊಮ್ಮೆ ಚಿಕ್ಕಪುಟ್ಟ ಬೀದಿ ಬದಿ ವ್ಯಾಪಾರಸ್ಥರ ಅಂಗಡಿ-ಮುಂಗಟ್ಟುಗಳನ್ನು ಖಡಾಖಂಡಿತವಾಗಿ ತೆರವುಗೊಳಿಸುವ ಬಿಬಿಎಂಪಿ ಶ್ರೀಮಂತರ ವಿಚಾರದಲ್ಲಿ ಈ ಮಲತಾಯಿ ಧೋರಣೆ ತೋರುತ್ತಿರುವುದ್ದು . ಬಿಬಿಎಂಪಿ ಯಲ್ಲಿ ಹಾಗಾದರೆ ಯಾರು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಕಟ್ಟಡ ನಿರ್ಮಾಣ ಮಾಡಬಹುದಾ. ಬಿಬಿಎಂಪಿ ಗೆ ಸಂಬಂದಿಸಿದ ಅಧಿಕಾರಿಗಳು ನಾಗರಿಕರು ಹೇಳುವುದಕ್ಕೆ ಮುಂಚಿತವಾಗಿ ಯಾಕೆ ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡುವುದನ್ನು ತಡೆಯಲಿಲ್ಲ ಉತ್ತರ ಕೊಡಿ. ಎಂದು ಸಾಮಾಜಿಕ ನ್ಯಾಯವನ್ನು ಪ್ರಶ್ನಿಸಿ ಹಲವು ದೂರಿನ ವಿಧಗಳು ಬಿಬಿಎಂಪಿಯ ಮೆಟ್ಟಿಲೇರಿದ್ದವೆ. ಬಿಬಿಎಂಪಿ ಯಲ್ಲಿ KMC ACT 1776 321(1) 321(2)321(3) 321( 4) 308 426 ಇನ್ನು ಮುಂತಾದ ಕಲಂಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದರು ಕ್ರಮ ಕೈಗೊಂಡಿಲ್ಲ ಏಕೆ ಈಗಲಾದರೂ ಕಟ್ಟಡವನ್ನು ತೆರವುಗೊಳಿಸಿ ಸ್ಥಳವನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಉಪಯೋಗವಾಗುವಂತೆ ಅನುಕೂಲ ಮಾಡಿಕೊಡುವುದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ.

ವರದಿ : ತಿಪ್ಪೇಸ್ವಾಮಿ ಸಿ.ಪಿ.


Spread the love