ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಯು ತನ್ನ ಪತ್ನಿ ರಂಜಿತಾ ಎಂಬುವಳು ಅಪರಿಚಿತ ನಾಗರಾಜಪ್ಪ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಶಂಕಿಸಿ ಹೆಂಡತಿಯ ತಾಯಿ ( ಆರೋಪಿಯ ಅತ್ತೆ) ಮತ್ತು ತಂಗಿ ( ಆರೋಪಿಯ ನಾದಿನಿ ) ಯ ಮೇಲೆ ಹಲ್ಲೆ ನಡೆಸಿ ಮನೆಗೆ ನುಗ್ಗಿ ಗಲಾಟೆ ಮಾಡಿ ಮನೆಯ ಮುಂದಿನ ಖಾಲಿ ನಿವೇಶನದಲ್ಲಿ ಇದ್ದ ಕಟ್ಟಿಗೆಯ ತುಂಡುಗಳಿಂದ ಬಲವಾಗಿ ಹೊಡೆದದ್ದರಿಂದ ರಾಮಾಂಜಿನಮ್ಮ ಮತ್ತು ನಾಗಮಣಿ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದ್ದು 2018 ರಲ್ಲಿ ಪಿಎಸ್ಐ ಮಹೇಶ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸತ್ಯಾಂಶ ಹೊರ ಬಿದ್ದಿದ್ದು ಆರೋಪಿಯನ್ನು ಐಪಿಸಿ 302 ಅಡಿಯಲ್ಲಿ ಕೇಸು ದಾಖಲಿಸಿಕೊಂಡು ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು . ಇಂದು 60 – 04 – 2022 ಬುಧವಾರ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ” ಶ್ರೀ ತಾರಕೇಶ್ವರ ಗೌಡ ಪಾಟೀಲ್ ” ರವರು ಆರೋಪಿಯ ತನಿಖೆಗೆ ಕಲಂ 302 ಐಪಿಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ 1,00,000/- ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ಮೃತರ ವಾರಸುದಾರರಿಗೆ ರೂ 90,000/- ಪರಿಹಾರ ನೀಡುವಂತೆ ಆದೇಶಿಸಿದ್ದು. ಪ್ರಕರಣದಲ್ಲಿ ಆಯೋಜನೆ ಪರವಾಗಿ ಬಿ. ಎಂ. ನಿರಂಜನಮೂರ್ತಿ , ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದಾರೆ.
ವರದಿ : ✍️ಅಗ್ನಿ ಅಜಿತ್