Spread the love

ಇಂದು ಬಳ್ಳಾರಿ ಜಿಲ್ಲಾ ಸಿರುಗುಪ್ಪ ನಗರದ ಪತಂಗಿ ಪಂಕ್ಷನ್ ಸಭಾಂಗಣದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀ ಬಿ. ಈರಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಟಿಎಂ ಚಂದ್ರಯ್ಯ ಸ್ವಾಮಿ ಹಾಗೂ ಶ್ರೀಬಿ.ಮುರಳಿ ಕೃಷ್ಣ ಅವರ ಸಮಕ್ಷಮದಲ್ಲಿ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಶಿವಯೋಗಿ ಅವರು ಬಿಜೆಪಿ ಸರ್ಕಾರ ಜನರಿಗೆ ಗ್ಯಾಸ್ ಪೆಟ್ರೋಲ್ ಅಡಿಗೆ ಎಣ್ಣೆಬಳಸುವಂತ ಎಲ್ಲಾ ಇನ್ನಿತರೆ ಹೆಚ್ಚಿಗೆ ಮಾಡಿ ಜನರು ಬಿಜೆಪಿ ಸರ್ಕಾರ ನಂಬಿಕೊಂಡು ರೋಸಿಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದ ತತ್ವ-ಸಿದ್ಧಾಂತ ನೋಡಿ ಕಾಂಗ್ರೆಸ್ ಸೇರ್ಪಡೆ ಹೊಂದಿರುವಂತ ಬಿ. ಈರಣ್ಣಅವರಿಗೆ ಪಕ್ಷ ಯಾವಾಗಲೂ ಸ್ವಾಗತಿಸುತ್ತದೆ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ ಎಂ ಚಂದ್ರಯ್ಯ ಸ್ವಾಮಿ ಮಾಜಿ ಶಾಸಕರಾದ ಶ್ರೀ ಬಿಎಂ ನಾಗರಾಜ್ ಹಾಗೂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಶಿವಯೋಗಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕರಿಬಸಪ್ಪ ನಾಗರಾಜ್ ಗೌಡ ನಗರಸಭೆ ಅಧ್ಯಕ್ಷರಾದ ಸುಶೀಲಮ್ಮ ವೆಂಕಟರಾಮರೆಡ್ಡಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ ಮಲ್ಲಿಕಾರ್ಜುನ ಗಜಗಳ ವೀರೇಶಗೌಡ ರಾಮಣ್ಣ ಮಾಜಿ ಎಪಿಎಂಸಿ ಅಧ್ಯಕ್ಷರಾದ ಎಂ ಶಿವಶಂಕರ ಗೌಡ ಹಚ್ಚೋಳಿ ಸೀನಪ್ಪ ಮಾರುತಿ ವರಪ್ರಸಾದ ರೆಡ್ಡಿ ಬಿಕೆ ರಘು ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ವೆಂಕಟರಾಮರೆಡ್ಡಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಡಿ ನಾಗರಾಜ್ ಮತ್ತು ನಗರಸಭೆ ಎಲ್ಲಾ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬನ್ನಿ ಗೌಡ ಹಾಗೂ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಹೆಚ್ ಮಲ್ಲೇಶ್ವರ ಅರಳಿಗನೂರು ಬಳ್ಳಾರಿ ಜಿಲ್ಲಾ ವರದಿಗಾರರು


Spread the love