Spread the love

2022 ನೇ ಸಾಲಿನ “ಭೀಮರತ್ನ ಪ್ರಶಸ್ತಿ” ಯನ್ನು ನಾಡಿನ ಹೆಸರಾಂತ ಸಾಹಿತಿ ಮತ್ತು ಬರಹಗಾರರಾದ ‘ರಾಜಪ್ಪ ದಳವಾಯಿ’ ಅವರಿಗೆ ಕೊಡಲಾಗುವುದು. ಅವರು ಬರೆದಿರುವ ‘ ವಿ ದ ಪೀಪಲ್ ಆಫ್ ಇಂಡಿಯಾ ‘ ( We the people of India ) ಕೃತಿ ಆಧಾರಿತ ನಾಟಕವು ಶಿವಮೊಗ್ಗ ರಂಗಾಯಣ ತಂಡದ ಮೂಲಕ ಅತ್ಯುತ್ತಮ ಪ್ರದರ್ಶನಗಳನ್ನು ಕಾಣುತ್ತಿದ್ದು ಡಾ. ಬಿ.ಆರ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ವಿಚಾರಧಾರೆಯನ್ನು ಕುರಿತು ನಾಟಕದ ಸಾಹಿತ್ಯವು ವಿಶೇಷ ರೀತಿಯಲ್ಲಿ ಬರೆಯಲ್ಪಟ್ಟಿದೆ. ನಾಟಕವು ಸಹ ಅತ್ಯಾಕರ್ಷಕ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಳವಾಯಿಯವರ ಅವರ ಈ ಕೃತಿಯು ಹೊಸ ಜಾಗೃತಿ ಅಲೆಯೊಂದನ್ನು ಸೃಷ್ಟಿಸಿದೆ ಮತ್ತು ಇಂದಿನ ಪೀಳಿಗೆಗೆ ಅಂಬೇಡ್ಕರ್ ಕುರಿತಂತೆ ಹೊಸ ಚಿಂತನೆ ಮತ್ತು ಸಂದೇಶವನ್ನು ಸಾರಿದೆ.

ಅಂಬೇಡ್ಕರ್ ಬಗ್ಗೆ ಇದುವರೆಗೂ ಕನ್ನಡ ನಾಟಕ ರಂಗದಲ್ಲಿ ಇಂತಹ ವಿಶೇಷ ರೀತಿಯ ಮತ್ತು ಅರ್ಥಪೂರ್ಣ ಪ್ರಯೋಗವೊಂದು ಮೂಡಿಬಂದಿರಲಿಲ್ಲ . ಅಂಬೇಡ್ಕರ್ ಪಾತ್ರ ಮತ್ತು ಸಂದೇಶವನ್ನು ಈ ನಾಟಕದಲ್ಲಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯಲ್ಲೂ ಕೂಡ ಕಾಣುವ ರೀತಿಯಲ್ಲಿ ಚಿತ್ರಿಸಲಾಗಿದೆ. ಸಂವಿಧಾನ ಪ್ರಸ್ತಾವನೆಯನ್ನು ಆಧರಿಸಿರುವ ಈ ನಾಟಕ ಕೃತಿಯ ಕತೃ ರಾಜಪ್ಪ ದಳವಾಯಿ ಅವರನ್ನು ಈ ವರ್ಷದ ‘ಭೀಮರತ್ನ ಪ್ರಶಸ್ತಿ’ ಗೆ ವೈ. ಎಸ್. ದೇವೂರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ.25,000 ನಗದು ಬಹುಮಾನ ಅಭಿನಂದನಾ ಫಲಕ ಮತ್ತು ಸ್ಮರಣಿಕೆಗಳನ್ನು ಹೊಂದಿರುತ್ತದೆ .

ಈ ವಿಚಾರವಾಗಿ ಇಂದು 12.04.2022 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯನ್ನು ಮಾನ್ಯ ಗಣ್ಯವ್ಯಕ್ತಿಗಳಾದ ಡಾ. ವಿನಯ್ ಕುಮಾರ್ ವಿ ನಾಯಕ್ , ( ರಾಜ್ಯ ಉಪಾಧ್ಯಕ್ಷರು ಅರ್.ಪಿ. ಐ ) ವೈ. ಎಸ್. ದೇವೂರ್ , ( ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು – ವಿಶ್ವ ಬುದ್ಧ ಧಮ್ಮ ಸಂಘ ) , ಗಂಗಾಧರಯ್ಯ ಸದಸ್ಯರು – ನಾಗಸೇನ ವಿದ್ಯಾಲಯ , ಬನಶಂಕರಿ ನಾಗು – ಅಧ್ಯಕ್ಷರು ಕರ್ನಾಟಕ ದಲಿತ ಸೇನೆ, ಚಳುವಳಿ ನಾಗೇಶ್ ( ಬೆಂಗಳೂರು ಜಿಲ್ಲಾಧ್ಯಕ್ಷರು ಯುವ ಘಟಕ ಅರ್. ಪಿ. ಐ ) ರವರುಗಳು ಉಪಸ್ಥಿತರಿದ್ದರು.

14.04.2022 ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರು ಸದಾಶಿವನಗರದ ನಾಗೇಶನ ವಿದ್ಯಾಲಯದ ಬುದ್ಧ ವಿಹಾರದಲ್ಲಿ ಯೋಜನೆ ಮಾಡಿರುವ ಅಂಬೇಡ್ಕರ್ ರವರ 131ನೇ ಜಯಂತೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಕೊಡಲಾಗುವುದು . ಡಾ. ಎಂ. ವೆಂಕಟಸ್ವಾಮಿ ಅವರ ಉದ್ಘಾಟಿಸುವ ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಧಮ್ಮಾಚಾರಿ ಡಾ. ಎಚ್ .ಆರ್ ಸುರೇಂದ್ರ ಅವರು ವಹಿಸುವರು. ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾದ ಡಾ. ಸಿ .ಸೋಮಶೇಖರ್ ರವರು ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸುವರು . ಬೌದ್ಧ ಬಿಕ್ಕುಣಿ ಬುದ್ದಮ್ಮ ಮತ್ತು ಬಿಟ್ಕೋ ಸಂಘ ಸಾನಿಧ್ಯವಹಿಸುವರು . ನಾಗಸೇನ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ವಿಶ್ವ ಬುದ್ಧ ಮತ್ತು ಧಮ್ಮ ಸಂಘ , ಹಾಗೂ ಸಮತಾ ಸೈನಿಕ ದಳ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುವರು ಎಂದು ತಿಳಿಸಿದ್ದಾರೆ.


Spread the love