Spread the love

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಡ್ಡೆನಹಳ್ಳಿ ಗ್ರಾಮದಲ್ಲಿ ಎಲ್ಲ ಸಮುದಾಯದ ಜನಾಂಗದವರು ಸೇರಿ ಡಾ. ಬಿ ಆರ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ಆಚರಿಸುವ ಮೂಲಕ ಹಳ್ಳಿಯನ್ನು ಸಮಾನತೆಯ ತತ್ವತೆಯಿಂದ ಗುರುತಿಸಿಕೊಂಡಿತ್ತು .

ಊರ ಹೆಬ್ಬಾಗಿಲಿನಲ್ಲಿ ಸಂವಿಧಾನವೇ ನಮ್ಮ ಧರ್ಮ ಎಂಬ ಶೀರ್ಷಿಕೆಯ ದೊಡ್ಡ ಫಲಕವನ್ನು ಹಾಕಿ ಇಡೀ ಹಳ್ಳಿಯ ಜನರೆಲ್ಲ ಹಬ್ಬದಂತೆ ಜಯಂತಿಯನ್ನು ಉತ್ಸಾಹ ಭರಿತವಾಗಿ ಆಚರಿಸಿಕೊಂಡಿದ್ದಾರೆ ಈ ಕಾರ್ಯಕ್ರಮವು ಮಹಿಳೆಯರ ಜಾಗೃತಿ ಮತ್ತು ಹಳ್ಳಿಯ ಜನರಲ್ಲಿ ಸಹಬಾಳ್ವೆ ಸಮಾನತೆಯನ್ನು ಮೂಡಿಸುವುದಾಗಿದ್ದು. ಇದರ ನೇತೃತ್ವವನ್ನು ಡಾ. ಬಗ್ಗನಡು ನಾಗಭೂಷಣರವರ ಮಾರ್ಗದರ್ಶನದ ಮೇರೆಗೆ ” ದೊಡ್ಡೆನಹಳ್ಳಿ ಕ್ಷೇಮಾಭಿವೃದ್ಧಿ ಸಂಘದ ” ಯುವಕರು ವಹಿಸಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ದೊರೆರಾಜು ಮತ್ತು ಪ್ರೊಫೆಸರ್ ಕೊಟ್ಟ ಶಂಕರ್ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದೊರೆರಾಜು ರವರು ‘ ಶಿಕ್ಷಣ ಸಂಘಟನೆ ಹೋರಾಟದ ತದ್ಭವ ರೂಪ ಡಾ. ಬಿ.ಆರ್ ಅಂಬೇಡ್ಕರ್ ಅವರು ಮತ್ತು ಈ ದೇಶದಲ್ಲಿ ಸಮಾನತೆಯ ಬೀಜ ಬಿತ್ತಿದ ಅದನ್ನು ಕಾನೂನಾತ್ಮಕವಾಗಿಯು ಸಮಾನತೆಯನ್ನು ಕಟ್ಟಿ ಕೊಟ್ಟಂತಹ ಸಾಹಸಿ ವ್ಯಕ್ತಿ ಅವರು ಆದ್ದರಿಂದ ಅವರು ಇಂದು ವಿಶ್ವದಾದ್ಯಂತ ಪೂಜನೀಯ ಸ್ಥನದಲ್ಲಿ ಇಡಲಾಗಿದೆ. ಸಮಾಜದಲ್ಲಿನ ಸ್ತ್ರೀ ಮೇಲಿನ ದೌರ್ಜನ್ಯ ಮತ್ತು ಮೇಲುಕೀಳಿನ ಮನೋಭಾವಗಳನ್ನು ಕಿತ್ತೆಸೇಯವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಯವರು ಅವರ ಪರಿಶ್ರಮ ಮತ್ತು ಸಾಧನೆಯಿಂದ ಇಂದು ನಾವೆಲ್ಲ ನೆಮ್ಮದಿಯ ಬದುಕುವುದನ್ನು ಬದುಕುತ್ತಿದ್ದೇವೆ . ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಡಿದ ಯಾರಾದರೂ ನಿಸ್ವಾರ್ಥಿ ವ್ಯಕ್ತಿಯನ್ನುವುದಿದ್ದರೆ ಅದು ಕೇವಲ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ಮಾತ್ರ ಕಾರಣ ಅವರ ತ್ಯಾಗದ ಫಲವಾಗಿ ಹೆಣ್ಣುಮಕ್ಕಳು ಕಾನೂನಿನ ಅರಿವು ಮತ್ತು ಶಿಕ್ಷಣದ ಅರಿವು ಗಳನ್ನು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕಾಗಿದೆ ‘ ಎಂದು ಹೇಳಿದರು , ಇನ್ನು ಈ ಸಂದರ್ಭದಲ್ಲಿ ಮಾತನಾಡಿ ದಂತಹ ಪ್ರೊಫೆಸರ್ ಕೊಟ್ಟ ಶಂಕರ್ ಅವರು ‘ ಅಂಬೇಡ್ಕರ್ ಅವರು ಆಸೆಗಳೇ ಇಲ್ಲದೆ

ಬದುಕುತ್ತಿದ್ದ ಸಮುದಾಯಕ್ಕೆ ಶಿಕ್ಷಣ ,ನೌಕರಿ, ನಾಯಕತ್ವದ, ಕನಸು ಬಿತ್ತಿದ ಮಹಾನ್ ಚೇತನ . ಆದ್ದರಿಂದ ನಾವು ಮೊದಲು ನಿಮ್ಮ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಹೆಣ್ಣು-ಗಂಡಿನ ಬೇದ ತೋರದೆ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ನಮ್ಮ ಜೀವನ ಮತ್ತು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಆದ್ದರಿಂದ ನಿಮ್ಮ ಮಕ್ಕಳನ್ನು, ಯುವಕರನ್ನು ಶಿಕ್ಷಣವಂತರನ್ನಾಗಿ ಮಾಡಿ, ಚಿಂತಿಸುವಂತೆ ಮಾಡಿ, ಜಾಗೃತರನ್ನಾಗಿ ಮಾಡಿ, ಸಂಘಟಿತರನ್ನಾಗಿ ಮಾಡಿ ‘ ಎಂದು ಹೇಳಿದರು ಇನ್ನು ಈ ಕಾರ್ಯಕ್ರಮಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಾರಣ್ಣ , ಡಾ. ಕರಿಯಣ್ಣ ಬಿ ಎನ್ ಬೆಟ್ಟ, ಡಾ ಕುಮಾರ್ ಇಂದ್ರಬೆಟ್ಟ, ಯುವ ಮುಖಂಡರಾದ ಉಮೇಶ್ ಡಿ, ಕಂಪಳಪ್ಪ, ವಿದ್ಯಾರ್ಥಿ ಮುಖಂಡರಾದ ಮಲ್ಲಿಕಾರ್ಜುನ್ ಕಣಿವೆನಹಳ್ಳಿ ಸೇರಿದಂತೆ ಊರಿನ ಪ್ರಮುಖರು ಮತ್ತು ಗ್ರಾಮಸ್ಥರು ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಭಾಗಿಯಾಗಿದ್ದರು.


Spread the love