ಕನ್ನಡದ ಮೂರು ಖ್ಯಾತನಾಮರ ಹೆಸರಿನಿಂದ ಪ್ರಾರಂಭವಾದ DSK ಕ್ರಿಕೆಟ್ ಕಪ್ ಪಂದ್ಯಾವಳಿಗಳು ಮುಗಿದಿದ್ದು ಪ್ರೇಮಮಯಿ ಚಿತ್ರತಂಡ ಫೈನಲ್ ಹಣಾಹಣಿಯಲ್ಲಿ ಗೆದ್ದು ಬೀಗಿದೆ. ಪಂದ್ಯಾವಳಿಗಳಲ್ಲಿ ಮಾಜರ್ ಚಿತ್ರ ರನ್ನರ್ ಪ್ರಶಸ್ತಿ ಗಳಿಸಿದ್ದಾರೆ. ಪಂದ್ಯಾವಳಿಗಳಲ್ಲಿ ಅತ್ಯಂತ ಶಿಸ್ತಿನ ತಂಡವಾಗಿ ಜಾರುಬಂಡೆ ಚಿತ್ರ ಹೊರಹೊಮ್ಮಿದ್ದು ಸರಣಿ ಶ್ರೇಷ್ಠ ಪ್ರಶಸ್ತಿ ಪ್ರೇಮಮಯಿ ಚಿತ್ರತಂಡದ ಅಣ್ಣಯ್ಯಪ್ಪ ಪಾಲಾಗಿದೆ. ಚಲನಚಿತ್ರ ಉದ್ದಿಮೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮಂಡಳಿ ಈ ಪಂದ್ಯಾವಳಿಗಳನ್ನು ಆಯೋಜಿಸಿದ್ದು ಇದರ ಮುಖ್ಯಸ್ಥ ಡಾ. ಸುನೀಲ ಕುಂಬಾರ್,ಆಡಳಿತ ಮಂಡಳಿಯ C H ಪಾಟೀಲ್, ಚಲನಚಿತ್ರ ನಿರ್ದೇಶಕ ಗುರುರಾಜ್ ಕುಲಕರ್ಣಿ ಮತ್ತು ಸುಧಾರಾಜು- ಅಧ್ಯಕ್ಷರು ಸುಧೆ ಎಜುಕೇಶನ್ ಟ್ರಸ್ಟ್ವ ರವರು ಈ ಪಂದ್ಯಾವಳಿಗಳ ನೇತೃತ್ವ ವಹಿಸಿದ್ದರು. ಈ ಪಂದ್ಯಾವಳಿಗಳಲ್ಲಿ ಅಲ್ಲೇ ಡ್ರಾ ಅಲ್ಲೇ ಬಹುಮಾನ, ಚಾರ್ಜ್ ಶೀಟ್, ಚಿ ತು ಯುವಕರ ಸಂಘ, ಜಾರು ಬಂಡೆ, ಮರ್ದಿನಿ, ಮಾಜರ್, ಒಂದಿಷ್ಟು ದಿನಗಳ ಕೆಳಗೆ, ಓ ಮನಸೇ, ಪ್ರೇಮಮಯಿ ಮತ್ತು ಮಾಧ್ಯಮ ತಂಡಗಳು ಭಾಗವಹಿಸಿದ್ದವು. DSK ಪಂದ್ಯಾವಳಿಗಳಿಗೆ ಪ್ರಮುಖ ಪಾಯೋಜಕರಾಗಿ ಸುಧೆ ಎಜುಕೇಶನ್ ಟ್ರಸ್ಟ್, ಸುರಕ್ಷಾ ಫೈನಾನ್ಸ್, ವಿನಯ ಕೆಫೆ, ವಿಧ್ಯಾ ಕಾಫಿ, ಸೆವೆನ್ ರಾಜ್, ಟಾಕಿಂಗ್ ಟ್ರೀ, ಸಿಗ್ನೇಚರ್ ಅಟೈರ್, ಐರೆಕ್ಸ್ ಸ್ಟುಡಿಯೋ, ಅಲ್ಟಿಮಟೆಕ್, ಆರೋಗ್ಯ ಅಮೃತ, ಕಾಬುಲ್ ಫೈಲ್ಸ್, ನೋಡದ ಪುಟಗಳು ಭಾಗವಹಿಸಿದ್ದವು. ಅತಿಥಿಗಳಾಗಿ ಬಿಗ್ ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೋಟೂರ್, ಯುವ ನಟ ಸಾಗರ್ ಚಿತ್ರರಂಗದ ಗಣ್ಯರಾದ ನಿರ್ಮಾಪಕ ಸೆವೆನ್ ರಾಜ್, ನಿರ್ದೇಶಕಿ ತೃಪ್ತಿ ಅಭಿಕರ್ ಭಾವಹಿಸಿದ್ದರು. ಪಂದ್ಯಾವಳಿಗಳ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಹೇಳಿದ್ದಾರೆ ಆಯೋಜಕರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಚನೆಯೊಂದಿಗೆ ಸೀಸನ್ 2 ಆಯೋಜಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಚಿತ್ರರಂಗದವರ ಈ ಹೊಸ ಸಾಹಸಕ್ಕೆ ಶಹಬಾಷ್ ಹೇಳೋಣ