ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಿಂಹಗಿರಿ ಗ್ರಾಮದ ಅರಣ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಎ.ಸಿ.ಹಳ್ಳಿ ,ಹುಲಿಕುಂಟೆ,ನರಸಿಂಹಗಿರಿ,ಹಾಗೂ ಬೆಳ್ಳಿಗಟ್ಟ ಗ್ರಾಮಗಳ ಕೂಲಿಗಾರರಿಂದ ಗೋಕಟ್ಟೆ ನಿರ್ಮಾಣ ಭರದಿಂದ ಸಾಗುತ್ತಿದ್ದು ಸ್ಥಳಕ್ಕೆ ಸಹಾಯಕ ನಿರ್ದೇಶಕ ಹೆಚ್.ಬೋರಯ್ಯ.ಬೇಟಿ ನೀಡಿದರು ಈವೇಳೆ ಮಾತನಾಡಿದ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸರ್ಕಾರ ಹೆಣ್ಣು ಮತ್ತು ಗಂಡುವಿಗೆ ಸಮಾನ ಕೂಲಿ ನೀಡುತ್ತಿದೆ ದಿನಗೂಲಿ 309 ನಿಗದಿಪಡಿಸಿದೆ ಈ ಯೋಜನೆಯಲ್ಲಿ ಬಂದಂತಹ ಕೂಲಿಮೊತ್ತದ ಹಣವನ್ನು ಅನಾವಶ್ಯಕ ಖರ್ಚು ಮಾಡದೆ ನಿಮ್ಮ ಮಕ್ಕಳ ಶಾಲಾ ಹಾಗೂ ಕಾಲೇಜ್ ಫೀ ಕಟ್ಟಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ಕೂಲಿಗಾರರಿಗೆ ಕಿವಿ ಮಾತು ಹೇಳಿದರು. ಬಳಿಕ ಕೂಲಿಗಾರರು ಮಾತನಾಡಿ ಈ ಯೋಜನೆ ನಮಗೆ ತುಂಬಾ ಉಪಯುಕ್ತವಾಗಿದ್ದು ದಿನಕ್ಕೆ 309 ರುಪಾಯಿ ಕೂಲಿ ಸಂದಾಯವಾಗುತ್ತದೆ.ನಾವು ಬೇರೆ ಕಡೆ ಖಾಸಗಿ ಕೆಲಸಕ್ಕೆ ಹೋದರೆ ದಿನಕ್ಕೆ150 ರಿಂದ 200 ರುಪಾಯಿಗಳು ಕೊಡುತ್ತಾರೆ ಹಾಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವಾರ್ಷಿಕ ಒಂದು ಕುಟುಂಬಕ್ಕೆ 100ದಿನ ಕೆಲಸ ನೀಡುತ್ತಿದ್ದು ನಮಗೆ ಸಾಕಾಗುವುದಿಲ್ಲ ಒಂದು ಕುಟುಂಬಕ್ಕೆ 150ದಿನ ಕೆಲಸ ಕೊಡಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಬಸವರಾಜ್ J.E ಬಾಳಪ್ಪ ಸಜ್ಜನ್ ಸೇರಿದಂತೆ ಸರ್ವಸದಸ್ಯರು ಇದ್ದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇದೇ ರೀತಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡರೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಬಡವರು ಗುಳೆ ಹೋಗುವುದು ತಪ್ಪುತ್ತದೆ ಎಂಬುದೇ ಈ ಯೋಜನೆಯ ಆಶಯವಾಗಿದೆ.
ವರದಿ :ಬೋರಯ್ಯ ಜಿ.ಜಿ.
ವಿಜಯನಗರ ಜಿಲ್ಲೆ