Spread the love

ಮೈಸೂರು: ರಾಜ್ಯಸಭೆ ಚುನಾವಣೆಯ ಕಾವು ಆರುವ ಮೊದಲೇ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕದನ ಆರಂಭವಾಗಲಿದ್ದು ರಾಜ್ಯದ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವಿರುವ ಮೈಸೂರು ಪ್ರಾಂತ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೆಡಿಎಸ್ ನಲ್ಲಿರುವ ಭಿನ್ನಾಭಿಪ್ರಾಯದ ಪ್ರಯೋಜನ ಪಡೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದ್ದು ಮೊದಲ ಬಾರಿಗೆ ಗೆದ್ದು ಇತಿಹಾಸ ಸೃಷ್ಟಿಸಬೇಕು ಎಂದು ಹೊರಟಿದೆ. ಇನ್ನು ಕೆಲವು ನಾಯಕರ ಬಂಡಾಯವನ್ನು ಬಹಿರಂಗವಾಗಿ ಎದುರಿಸುತ್ತಾ ಸಂಕಷ್ಟದಲ್ಲಿರುವ ಜೆಡಿಎಸ್ ಮೈಸೂರಿನಲ್ಲಿ ಮತ್ತೆ ಸ್ಥಾನ ಪಡೆಯಲು ನೋಡುತ್ತಿದೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಳೆ ಮೈಸೂರು ಭಾಗದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಶ್ರಮಿಸಬೇಕೆಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ಹಿಂದಿನ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಅತ್ಯಲ್ಪ ಮತಗಳಿಂದ ಸೋಲು ಕಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಮಾಜಿ ಎಂಎಲ್ ಸಿ ಜಿ ಮಧುಸೂದನ ಅವರ ಬದಲಿಗೆ ಬಿಜೆಪಿ ಹಿರಿಯ ಕಾರ್ಯಕಾರಿ ಎಂ ವಿ ರವಿಶಂಕರ ಅವರಿಗೆ ಮಣೆ ಹಾಕಿದೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸಿಗಬಹುದಾದ ಪ್ರಾಬಲ್ಯವನ್ನು ತಪ್ಪಿಸಲು ಬಿಜೆಪಿಗೆ ಈ ಬಾರಿ ಗೆಲುವು ಅನಿವಾರ್ಯವಾಗಿದೆ. ಇದು ಮೇಲ್ಮನೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಹುಮತ ಸಿಗುವಂತೆ ಮಾಡಿ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಅನುವು ಮಾಡಿಕೊಡುತ್ತದೆ.
ಆದರೆ ಪ್ರಬಲ ವೀರಶೈವ ಸಮುದಾಯದ ಸ್ವತಂತ್ರ ಅಭ್ಯರ್ಥಿ ಎನ್‌ಎಸ್ ವಿನಯ್ ಮತ್ತು ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಬಿಜೆಪಿ ನಾಯಕರು ಎರಡನೇ ಪ್ರಾಶಸ್ತ್ಯದ ಮತಕ್ಕಾಗಿ ಇತರ ಪಕ್ಷಗಳ ಒಲವು ಹೊಂದಿರುವ ಮತದಾರರ ಮನೆ ಬಾಗಿಲನ್ನು ತಟ್ಟುವಂತೆ ಮಾಡಿದೆ. ಕಾಂಗ್ರೆಸ್ ಗೆದ್ದರೆ ಇದು ಐತಿಹಾಸಿಕ ಗೆಲುವು ಆಗಲಿದ್ದು, ಜೆಡಿಎಸ್ ಆಂತರಿಕ ಕಲಹದಿಂದ ನಲುಗಿ ಹೋಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆ ಹೆಚ್ಚಿದೆ. ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರು ಮುನಿಸಿಕೊಂಡಿದ್ದಾರೆ, ಹಾಲಿ ಎಂಎಲ್ ಸಿ ಮರಿತಿಬೇಗೌಡ ಅವರು ಕಾಂಗ್ರೆಸ್ ಪರ ಬಹಿರಂಗ ಪ್ರಚಾರ ನಡೆಸುತ್ತಿದ್ದು, ಹಳೆ ಪಕ್ಷ ಕಾಂಗ್ರೆಸ್ ಗೆ  ಮೊದಲ ಬಾರಿಗೆ ಸೀಟು ಗೆಲ್ಲುವ ಅವಕಾಶ ಹೆಚ್ಚಾಗಿದೆ.
ಮಾಜಿ ಸಂಸದ ಜಿ ಮಾದೇಗೌಡ ಅವರ ಪುತ್ರ ಮಧು ಜಿ ಮಾದೇಗೌಡ ಅವರ ಉಮೇದುವಾರಿಕೆಯನ್ನು ಕಾಂಗ್ರೆಸ್ ಮೊದಲೇ ಘೋಷಿಸಿದ್ದು, ಮತದಾರರೊಂದಿಗೆ ಹತ್ತಿರವಾಗಲು ಸಾಕಷ್ಟು ಸಮಯಾವಕಾಶ ನೀಡಿದೆ. ಇಲ್ಲಿ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಜೆಡಿಎಸ್ ಒಟ್ಟು 1.33 ಲಕ್ಷ ಮತದಾರರ ಪೈಕಿ 58 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳನ್ನು ತನ್ನದಾಗಿಸಿಕೊಂಡಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಎಚ್‌ಕೆ ರಾಮು ಅವರ ಅಭ್ಯರ್ಥಿ ಪರ ಕಣಕ್ಕಿಳಿಯಲು ಮುಂದಾಗಿದೆ. ಮರಿತಿಬೇಗೌಡ ಬಂಡಾಯದ ನಡುವೆಯೂ ಅವರ ಅನುಯಾಯಿ ಕಿರಳೆ ಜಯರಾಂ ಹಾಗೂ ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಬೆಂಬಲಿಗರು ರಾಮು ಅವರ ಬೆನ್ನಿಗೆ ಬಿದ್ದಿದ್ದಾರೆ.

ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳು: ಎಂ ವಿ ರವಿಶಂಕರ್ (ಬಿಜೆಪಿ)
  ಮಧು ಜಿ ಮಾದೇಗೌಡ (ಕಾಂಗ್ರೆಸ್)
  ಎಚ್.ಕೆ.ರಾಮು (ಜೆಡಿಎಸ್)
  ರಫತ್ ಉಲ್ಲಾ ಖಾನ್ (ಎಸ್ ಡಿಪಿಐ)
   ಬಿ.ಎಚ್.ಚನ್ನಕೇಶವ ಮೂರ್ತಿ (ಬಿಎಸ್ಪಿ)
  ಎನ್ ವೀರಭದ್ರಸ್ವಾಮಿ (ಆರ್‌ಪಿಐ)
  ಜೆ ಅರುಣ್ ಕುಮಾರ್ (ಭಾರತ)
  ವಾಟಾಳ್ ನಾಗರಾಜ
  ಸಿ ಕಾವ್ಯಶ್ರೀ
  ಪುಟ್ಟಸ್ವಾಮಿ
  ಎನ್ ಪ್ರಸನ್ನ ಗೌಡ
  ಕೆ ಪಿ ಪ್ರಸನ್ನ ಕುಮಾರ್
  ಎಂ ಮಹೇಶ್
  ಜೆ ಸಿ ರವೀಂದ್ರ
  ಎನ್ ರಾಜೇಂದ್ರಸಿಂಗ್ ಬಾಬು
  ಎಸ್ ರಾಮು
  ಎನ್ ಎಸ್ ವಿನಯ್
  ಎಚ್ ಎಲ್ ವೆಂಕಟೇಶ್
  ಎಚ್ ಪಿ ಸುಜಾತಾ


Spread the love