Spread the love

ಮಾಧ್ಯಮ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ (ಸ) ಬಗ್ಗೆ ಅವಹೇಳನಕಾರಿ ನಿಂದನೆ ಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನುಪುರ್ ಶರ್ಮಾ ಹಾಗೂ ಬಿಜೆಪಿ ರಾಷ್ಟೀಯ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕು ಹಾಗೂ ಕಠಿಣ ಶಿಕ್ಷೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾ ಸಂಘ(ರಿ) ಚಿಕ್ಕಮಗಳೂರು ಘಟಕ ಒತ್ತಾಯಿಸಿದೆ.
ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ವಿರೋಧಿ ಅಲೆ ಸೃಷ್ಟಿಸಲಾಗುತ್ತಿದೆ. ಕೆಲವು ಕೋಮುವಾದಿಗಳು ದೇಶದಲ್ಲಿ ನಡೆಸುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮೌನ ಸಮ್ಮತಿಯನ್ನು ನೀಡುತ್ತಿರುವುದಲ್ಲದೆ ಎಲ್ಲಾ ಆಡಳಿತಾತ್ಮಕ ನೆರವನ್ನೂ ನೀಡುತ್ತಿದೆ. ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ, ಆಝಾನ್, ಮಸೀದಿ,ಈದ್ಗಾಗಳ ವಿವಾದ ಸೃಷ್ಟಿ ಹೀಗೆ ನಿರಂತರ ಮುಸಲ್ಮಾನರ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಸುತ್ತಿದ್ದು ಬಿಜೆಪಿ ಹಾಗೂ ಹಿಂದುತ್ವ ನಾಯಕರು ದ್ವೇಷ ಭಾಷಣಗಳನ್ನು, ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಲೇ ಇದ್ದಾರೆ. ಆದರೆ ಈ ಎಲ್ಲಾ ಸಂದರ್ಭಗಳಲ್ಲಿ ಯಾವುದೇ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಅಥವಾ ಕಡೆ ಪಕ್ಷ ಖಂಡಿಸುವ ಮಾತುಗಳನ್ನಾಡಲು ಮುಂದಾಗದ ಸರಕಾರಗಳು ಪ್ರವಾದಿ ನಿಂದನೆಯ ಈ ಪ್ರಕರಣದಲ್ಲಿ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ನುಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ರನ್ನು ಪಕ್ಷದಿಂದ ವಜಾಗೊಳಿಸಿರುವುದು ಬರೇ ಕಣ್ಣೊರೆಸುವ ತಂತ್ರ ಮಾತ್ರವಾಗಿದೆ.
ಪ್ರವಾದಿ ನಿಂದನೆಯನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ನುಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕು, ದೇಶದ ಆರ್ಥಿಕ ಪರಿಸ್ಥಿತಿಯನ್ನು, ಜಾತ್ಯಾತೀತ ಪರಂಪರೆಯನ್ನು ಸಂಪೂರ್ಣ ನಾಶಗೊಳಿಸಿ ಜಾಗತಿಕ ಮಟ್ಟದಲ್ಲಿ ದೇಶವು ತಲೆತಗ್ಗಿಸುವಂತೆ ಮಾಡಿರುವ ಕೇಂದ್ರ ಸರ್ಕಾರವನ್ನು ಈ ಕೂಡಲೇ ವಜಾ ಮಾಡಬೇಕು ಮತ್ತು ದೇಶದ ಮಾನವನ್ನು ಹರಾಜುಗೊಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾ ಸಂಘ ಚಿಕ್ಕಮಗಳೂರು ಘಟಕ ಆಗ್ರಹಿಸಿ ಈ ಘಟನೆಯನ್ನು ಖಂಡಿಸಿ ಕಾನೂನು ಮತ್ತು ಸುವ್ಯವಸ್ಥೆ ಇವರ ಮೇಲಿನ ಆರೋಪಗಳ ಮೇಲೆ ಇವರನ್ನು ಈ ಕೂಡಲೇ ಜಿಲ್ಲಾಧಿಕಾರಿಗಳಿಗೆ ಮನವಿ ಇತ್ತರು
ರಾಜ್ಯ ಉಪಾಧ್ಯಕ್ಷರಾದ ಶಿಹಾನ್ ಪಾಶ,
ರಾಜ್ಯ ಸಮಿತಿ ಸದಸ್ಯರು ನಯಾಜ್ ಅಹ್ಮದ್
ಜಿಲ್ಲಾ ಅಧ್ಯಕ್ಷರು ಅಜ್ಮಾಲ್, ಸಂಘಟನೆಯ ಮೆಹರಾಜ್, ನಾಯರ್, ಅಕ್ರಮ್, ವಾಜೀದ್ , ಫಾರೂಕ್, ಸಿದ್ದಿಕ್ ಉಪಸ್ಥಿತರಿದ್ದರು.


Spread the love