Spread the love

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಾಮಾಜ ಸೇವಕರಾದ ಟ. ದರಪ್ಪ ನಾಯಕ ಮುಂದಿನ 2023ರ ವಿಧಾನಸಭಾ ಚುನಾವಣೆ ಆಕಾಂಕ್ಷಿಯಾಗಿ ಅಮ್ ಆದ್ಮಿ ಪಾರ್ಟಿಯಿಂದ ಕಣಕ್ಕೆ ಇಳಿಯಲಿದ್ದು . ಹಗಲು ರಾತ್ರಿ ಎನ್ನದೆ ಈಗಿನಿಂದಲೇ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಅವರ ಸಮಸ್ಯೆಗಳನ್ನು, ಕುಂದು ಕೊರತೆಗಳನ್ನು ಆಲಿಸುತ್ತ ” ನಾನು ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತೇನೆ .ತಮ್ಮ ಒಂದು ಒಂದು ಮತವನ್ನು ನಮ್ಮ ಪಕ್ಷಕ್ಕೆ ಕೊಟ್ಟು ಕೊಡಿಸುವುದರ ಮೂಲಕ ಬಹುಮತದಿಂದ ಗೆಲ್ಲಿಸಬೇಕಾಗಿ ಹಾಗೂ ತಾವುಗಳು ತಮ್ಮ ಸೇವೆಗೆ ನಮಗೊಂದು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮತ ಜಾಗೃತಿ ಗೊಳಿಸಿದರು. ಸಮಾಜದ ಪ್ರಜ್ಞಾವಂತ ಯುವಕರು ವಿದ್ಯಾವಂತರು ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ ಎಂದು ನನ್ನ ಅಭಿಪ್ರಾಯ. ನನಗೊಂದು ಕನಸಿದೆ ತಾಲೂಕಿನ ಪ್ರತಿಯೊಂದು ಮಗು ತೃಪ್ತವಾದ ವಿದ್ಯಾಭ್ಯಾಸ ಪಡೆಯಬೇಕು ಅದನ್ನು ನಾನು ಮಾಡುತ್ತೇನೆ .ಪ್ರತಿಯೊಬ್ಬ ವಿದ್ಯಾರ್ಥಿಗೂ ಕೋಚಿಂಗ್ ಸೆಂಟರ್ ನ ಅವಶ್ಯಕತೆ ಇದ್ದು ಅದರ ಮೂಲಕ ತರಬೇತಿ ಉಪಯೋಗಿಸಿಕೊಂಡು ಉದ್ಯೋಗವಂತರಗಬೇಕು ಅದನ್ನು ಕೂಡ ನಾನು ಮಾಡುತ್ತೇನೆ. ಹಾಗೂ ಸಿರುಗುಪ್ಪ ತಾಲೂಕಿನ ಭ್ರಷ್ಟಾಚಾರ ಮುಕ್ತ ತಾಲೂಕ ಆಗಬೇಕು ಅದು ನನ್ನ ಆಶಯವಾಗಿದೆ ಅದಕ್ಕಾಗಿ ಶ್ರಮಿಸಿ ಅದನ್ನು ಸರಿಪಡಿಸುತ್ತೇನೆ. ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಿ ನನಗೊಮ್ಮೆ ಅವಕಾಶ ಕೊಟ್ಟು ನೋಡಿ ನಾನು ಸಮಾಜ ಸೇವೆ ಮಾಡಲು 2023 ವಿಧಾನಸಭಾ ಕ್ಷೇತ್ರಕ್ಕೆ ಅಮ್ ಆದ್ಮಿಪಾರ್ಟಿ ವತಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನನ್ನನ್ನು ಬೆಂಬಲಿಸಿ ನೋಡಿ ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ. ಕೊಟ್ಟ ಮಾತು ಹಿಟ್ಟೆ ಹೆಜ್ಜೆ ಎಂದಿಗೂ ಮರೆಯಲ್ಲ ” ಎಂದು ಜನರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಪಕ್ಷದ ಅಭಿವೃದ್ಧಿ ದೃಷ್ಟಿಯಿಂದ ಮತಯಾಚನೆಯ ಮುಂಜಾಗ್ರತ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

ವರದಿ : ಹೆಚ್ ಮಲ್ಲೇಶ್ವರ ಅರಳಿಗನೂರು, ಬಳ್ಳಾರಿ ಜಿಲ್ಲೆಯ ರಿಪೋರ್ಟರ್


Spread the love