ನವದೆಹಲಿ: ಮುಂದಿನ ದಿನಗಳಲ್ಲಿ ಅನುಕಂಪದ ಆಧಾರದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಕರ್ತವ್ಯದಲ್ಲಿ ಇದ್ದಾಗಲೇ ಉದ್ಯೋಗಿ ಅಸುನೀಗಿದ ಸಂದರ್ಭದಲ್ಲಿ ಆತನ ಪತ್ನಿ, ಪುತ್ರ, ಅಥವಾ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ನಿಯಮಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ತಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಪಾರದರ್ಶಕವಾಗಿರುವ ನಿಯಮಗಳು ಜಾರಿಯಾಗಲಿವೆ.ಕೇಂದ್ರ ಸರ್ಕಾರಿ ನೌಕರನ ಕುಟುಂಬ ಹೊಂದಿರುವ ವಿತ್ತೀಯ ಸ್ಥಿತಿ, ಸದ್ಯ ದುಡಿಯುತ್ತಿರುವ ಸದಸ್ಯರ ಸಂಖ್ಯೆ, ಕುಟುಂಬದಲ್ಲಿ ಅವಲಂಬಿತರ ಸಂಖ್ಯೆ, ಮಕ್ಕಳ ವಯಸ್ಸು ಇದನ್ನೆಲ್ಲ ಸಮಗ್ರವಾಗಿ ಪರಿಶೀಲನೆ ನಡೆಸಿ ನಿಗದಿತ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪರಿಷ್ಕೃತ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಈ ನಿಯಮವು ಜನೋಪಕಾರಕ್ಕೆ ಎಷ್ಟು ಸೀಮಿತವೋ ತಿಳಿಯದು ಆದರೆ ಅನೇಕ ಮಧ್ಯಮ ವರ್ಗದ ಕುಟುಂಬಗಳಿಗೆ ಸಂಕಷ್ಟಗಳ ಸಂಕೇತವೇ ಆಗಿದೆ ಎಂದು ಅವರ ಅಭಿಪ್ರಾಯವಾಗಿದೆ.