Spread the love

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬೈರತಿ ಸುರೇಶ್ ಅವರ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿಯ ಮಾಜಿ ಸಚಿವರಾದಂತಹ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಮಿತ್ರರಿಗೆ ದಾಖಲೆಗಳನ್ನು ಒದಗಿಸಿದರು. ಬರುತಿ ಸುರೇಶ್ ರವರು ತಮ್ಮ ಕ್ಷೇತ್ರದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಕಂಡು ಕಂಗಲಾಗಿ ನಿಯಂತ್ರಣ ತಪ್ಪಿ ಮನಬಂದಂತೆ ನಾಲಿಗೆಯನ್ನು ಅರಿದುಬಿಡುತ್ತಿದ್ದಾರೆ.

ರಾಜಕೀಯ ವಿರೋಧಿಗಳ ವಿರುದ್ಧ ಕೀಳು ಮಟ್ಟದ ವಾಗ್ದಾಳಿ ಇಳಿದಿದ್ದಾರೆ. ಬಿಜೆಪಿ ಸರ್ಕಾರವು ₹600 ಕೋಟಿ ಅನುದಾನವನ್ನು ನೀಡಿದ್ದರು ಅದರಲ್ಲಿ ಕೇವಲ 40% ಹಣವನ್ನು ಮಾತ್ರ ಬಳಸಿಕೊಂಡು ಮಿಕ್ಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಇನ್ನು ಹೆಬ್ಬಾಳ ಕ್ಷೇತ್ರದಲ್ಲಿ ನಡೆದ ಹಗರಣದ ಸ್ಫೋಟಕ ಸುದ್ದಿಗಳ ಮಾಹಿತಿಯನ್ನು ನೀಡಿ ಹಗರಣದಲ್ಲಿ ಇಬ್ಬರು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಒಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ ಭಾಗಿಯಾಗಿದ್ದರೆಂದು ಆರೋಪದ ಹೇಳಿಕೆಯನ್ನು ತಮ್ಮ ವೃತ್ತಿಪರ ಪತ್ರ(professional letterhead) ದಲ್ಲಿ ದಾಖಲಿಸಿ
ಪ್ರತಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ನೀಡಿದ್ದಾರೆ. ಈ ವೇಳೆ ಪ್ರತಿಕಾಗೋಷ್ಠಿಯಲ್ಲಿ ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಬಿ.ನಾರಾಯಣ್, ಎಂಸಿಎ ಅಧ್ಯಕ್ಷರಾದ ಶ್ರೀ ಸಿ.ಮುನಿಕೃಷ್ಣ, ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಮುಖ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love