Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಜರ್ಮಲಿ ಪಾಳೇಗಾರರ ಮನೆತನದ ಸಿದ್ದಪ್ಪನಾಯಕ ದೊರೆ ಉಪಾಧ್ಯಕ್ಷೆಯಾಗಿ ಹರವದಿ ಓಬಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಚುನಾವಣಾ ಅಧಿಕಾರಯಾಗಿದ್ದ ಕೂಡ್ಲಿಗಿ ತಹಶಿಲ್ದಾರ್ ಟಿ ಜಗದೀಶ್ ಘೋಷಿಸಿದರು ಜರ್ಮಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಈ ಹಿಂದೆ ಇದ್ದ ಅಧ್ಯಕ್ಷ ಬಸವರಾಜ್ ಉಪಾಧ್ಯಕ್ಷೆ ಮಲ್ಲಮ್ಮ ಇವರ ರಾಜೀನಾಮೆಯಿಂದ ತೆರವಾಗಿದ್ದ ಕಾರಣ ಇಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು 13 ಸದಸ್ಯರ ಬಲಾಬಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜರ್ಮಲಿ ಪಾಳೇಗಾರ ವಂಶಸ್ಥ ಸಿದ್ದಪ್ಪನಾಯಕ ದೊರೆ
ಉಪಾಧ್ಯಕ್ಷ ಸ್ಥಾನಕ್ಕೆ ಹರವದಿ ಓಬಮ್ಮ ಇವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರ ಅವಿರೋಧ ಆಯ್ಕೆಯನ್ನು ಕೂಡ್ಲಿಗಿ ತಹಶಿಲ್ದಾರ್ ಜಗದೀಶ್ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಬೇಟಿ ಮಾಡಿ ಶುಭ ಹಾರೈಸಿದ ಬಿಜೆಪಿ ಮುಖಂಡರಾದ ಬಂಗಾರು ಹನುಮಂತ, ಜೆ.ಶಶಿಧರ್,
ಜೆ.ಧನುಂಜಯ,ರಾಘವೇಂದ್ರ ಗುರಿಕಾರ್,ಭೀಮೇಶ್ ಸೇರಿದಂತೆ ಊರಿನ ಮುಖಂಡರು ಶುಭಹಾರೈಸಿದರು.

ವರದಿ:ಬೋರಯ್ಯ ಜಿ.ಜಿ
ಪ್ರತಿಭಟನೆ ನ್ಯೂಸ್ ವಿಜಯನಗರ


Spread the love