ಅಮರಾವತಿ : ಆಂದ್ರಪ್ರದೇಶ ಸರ್ಕಾರ ನೂತನ ರಚನೆಯಾದ ಕೋಣಸೀಮಾ ಜಿಲ್ಲೆಗೆ ಅಧಿಕೃತವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ ಜಿಲ್ಲಾ ಎಂದು ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಕೋಣಸೀಮಾ ಜಿಲ್ಲೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ ಜಿಲ್ಲೆ ಎಂದು ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಸರಕಾರ ನಿನ್ನೆ ತಡರಾತ್ರಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೊಸ ಜಿಲ್ಲೆಗಳ ರಚನೆಯ ಭಾಗವಾಗಿ, ಸರ್ಕಾರವು ಮೊದಲು ಕೋಣಸೀಮಾ ಜಿಲ್ಲೆಯನ್ನು ರಚಿಸಿತು. ಆದರಂತೆ, ಸರಕಾರ ಮೇ 18ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, ಜಿಲ್ಲೆಯ ಹೆಸರನ್ನು ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ ಜಿಲ್ಲೆ ಎಂದು ಬದಲಾಯಿಸಿತ್ತು.
ಜಿಲ್ಲೆಗೆ ಅಂಬೇಡ್ಕರ್ ಅವರ ಹೆಸರನ್ನು ಸೇರಿಸುವುದನ್ನು ವಿರೋಧಿಸಿ ಹಲವು ಆಂದೋಲನಗಳು ಹಿಂಸಾಚಾರಕ್ಕೆ ತಿರುಗಿದವು. ಇತ್ತೀಚೆಗೆ, ಅದೇ ಹೆಸರನ್ನು ಅಂತಿಮಗೊಳಿಸಿ ಸರ್ಕಾರ ಈಗ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಇನ್ನು ಮುಂದೆ ಈ ಜಿಲ್ಲೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ ಜಿಲ್ಲೆ ಎಂದು ನಾಮಕರಣ ಮಾಡಲಾಗಿದೆ